ಕುಶಾಲನಗರ, ಫೆ. ೧೮: ತನ್ನ ಪ್ರೇಯಸಿಯ ಕೊಲೆಗೆ ಯತ್ನಿಸಿದ ಆರೋಪ ಎದುರಿಸುತ್ತಿದ್ದ ಕುಶಾಲನಗರದ ಮುಳ್ಳುಸೋಗೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಬೆಂಗಳೂರು ಸೆಷನ್ಸ್ ಕೋರ್ಟ್ ೫ ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಕುಶಾಲನಗರ ಮುಳ್ಳುಸೋಗೆ ಗ್ರಾಮದ ಮಾಜಿ ಪೊಲೀಸ್ ಪೇದೆ ಅನಿಲ್ ಕುಮಾರ್ ಅಲಿಯಾಸ್ ರಾಹುಲ್ ಎಂಬವರು ಶಿಕ್ಷೆಗೆ ಒಳಗಾದ ಆರೋಪಿ.
ಮದುವೆಯಾಗಿ ಒಂದು ಮಗುವಿನ ತಂದೆಯಾಗಿದ್ದ ಅನಿಲ್ ಕುಮಾರ್ ೨೦೦೮ರಲ್ಲಿ ಯುವತಿಯೊಬ್ಬಳ ಜತೆ ಸ್ನೇಹ ಬೆಳೆಸಿದ್ದ. ಅನಿಲ್ ಕುಮಾರ್ ಗೆ ಮದುವೆಯಾಗಿರುವ ಬಗ್ಗೆ ಮಾಹಿತಿ ದೊರೆತ ಯುವತಿ ಆತನಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಅನಿಲ್ ಕುಮಾರ್ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದೇನೆ ಎಂಬ ಸುಳ್ಳು ಮಾಹಿತಿ ಕೂಡ ಹೇಳಿ ನಂಬಿಸಿದ್ದ ಎನ್ನಲಾಗಿದೆ.
ಕೆಲ ದಿನಗಳ ಬಳಿಕ ಅನಿಲ್ ಕುಮಾರ್ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ವಜಾಗೊಂಡಿದ್ದ ಮಾಹಿತಿಯು ಹೊರಬಿದ್ದಿದೆ. ಈ ನಡುವೆ ಆತ ಮೊದಲ ಪತ್ನಿಗೆ ವಿಚ್ಛೇದನ ನೀಡಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಆತನ ಮೇಲೆ ಯುವತಿಗೆ ಬಹುತೇಕ ಸಂಶಯ ಬಂದು ಅನಿಲ್ ಜೊತೆ ಸಂಪರ್ಕ ಕೂಡ ದೂರವಾಗಿತ್ತು.
ಬಳಿಕ ಅನಿಲ್ ಕುಮಾರ್ ತನ್ನ ಬೆಂಗಳೂರಿನ ಮನೆ ಟೆರೇಸ್ ಮೇಲೆ ಮಾತುಕತೆಗೆ ಕರೆದಿದ್ದು ಯುವತಿಯ ಮೇಲೆ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿದ ಎಂಬ ದೂರು ಯಲಹಂಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಈ ಸಂದರ್ಭ ಯುವತಿಯ ರಕ್ಷಣೆಗೆ ಮುಂದಾದ ನವೀನ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು.
ಪ್ರಕರಣಕ್ಕೆ ಸಂಬAಧಿಸಿದAತೆ ಯಲಹಂಕ ಪೊಲೀಸರು ಆರೋಪಿಯನ್ನು ಬಂಧಿಸಿ ಯುವತಿ ಮತ್ತು ಆಕೆಯ ಸ್ನೇಹಿತ ನವೀನನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ನಂತರ ೨೦೧೨ರಲ್ಲಿ ಅನಿಲ್ ಕುಮಾರ್ ಜಾಮೀನು ಪಡೆದು ಹೊರಬಂದಿದ್ದ ಎನ್ನಲಾಗಿದೆ.
ಈ ನಡುವೆ ಅನಿಲ್ ಕುಮಾರ್ ಬೆಂಗಳೂರಿನ ಯುವತಿಗೆ ಮತ್ತೊಮ್ಮೆ ಬೆದರಿಕೆ ಹಾಕಿರುವ ಬಗ್ಗೆ ಕೂಡ ದೂರಿನನ್ವಯ ಪೊಲೀಸರು ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದೀಗ ಬೆಂಗಳೂರಿನ ನಗರದ ೬೬ನೇ ಹೆಚ್ಚುವರಿ ಸಿಸಿಎಚ್ ನ್ಯಾಯಾಲಯ ಅನಿಲ್ ಕುಮಾರ್‌ಗೆ ೫ ವರ್ಷ ಜೈಲು ಶಿಕ್ಷೆ ಹಾಗೂ ರೂ. ೨೫ ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
ಆರೋಪಿ ಅನಿಲ್ ಕುಮಾರ್ ಕುಶಾಲನಗರ ಸಮೀಪದ ಮುಳ್ಳುಸೋಗೆ ನಿವಾಸಿಯಾಗಿದ್ದಾರೆ.