ಮಡಿಕೇರಿ, ಫೆ. ೧೮; ನಾಗರಹೊಳೆ ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಬೇಟೆ ಪ್ರಕರಣಕ್ಕೆ ಸಂಬAಧಿಸಿ ದಂತೆ ಈಗಾಗಲೇ ಬಂಧಿತನಾಗಿರುವ ಆರೋಪಿ ಮನೆಯಲ್ಲಿ ಸಿಕ್ಕಿರುವ ಬಂದೂಕು ಆತನ ಸ್ನೇಹಿತನದ್ದೆಂದು ತಿಳಿದು ಬಂದಿದೆ.
ಮಾಲ್ದಾರೆ - ತಟ್ಟಳ್ಳಿ ಬಳಿ ಹುಲಿ ಚರ್ಮ, ಉಗುರು, ಇನ್ನಿತರ ಭಾಗಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಸೆರೆ ಸಿಕ್ಕಿರುವ ಆರೋಪಿಗಳ ಪೈಕಿ ಮನೋಜ್ ಎಂಬಾತನ ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಬಂದೂಕು ಹಾಗೂ ಮದ್ದುಗುಂಡುಗಳು ಸಿಕ್ಕಿದ್ದವು. ವಿಚಾರಣೆ ವೇಳೆ ಈ ಬಂದೂಕು ಇವರುಗಳ ಸ್ನೇಹಿತನಾದ ಅಲ್ಲಿಯ ನಿವಾಸಿ ಹೊಳೆಕರೆ ವಿನೋದ್ ಎಂಬಾತನಿಗೆ ಸೇರಿದ್ದೆಂದು ತಿಳಿದು ಬಂದಿದೆ. ಬಂದೂಕನ್ನು ಹಾಡಿ ನಿವಾಸಿಯೋರ್ವ ವಿನೋದ್ ಬಳಿಯಿಂದ ತೆಗೆದು ಕೊಂಡು ಹೋಗಿರುವ ಬಗ್ಗೆ ತಿಳಿದುಬಂದಿದೆ. ಇದೇ ಬಂದೂಕು ಬಳಸಿ ಹುಲಿ ಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ..!
ಮಧ್ಯವರ್ತಿ..!
ಪ್ರಕರಣದಲ್ಲಿ ಬಂಧಿತನಾಗಿರುವ ಹಾಡಿಯ ಮುಖಂಡ ಅಪ್ಪಾಜಿಯದ್ದು ಹುಲಿ ಚರ್ಮ ಮಾರಾಟ ಮಾಡುವಲ್ಲಿ ಮಧ್ಯವರ್ತಿ ಕೆಲಸವಾಗಿದೆ.
(ಮೊದಲ ಪುಟದಿಂದ) ವ್ಯಾಪಾರಿಗಳನ್ನು ಹಿಡಿದು ವ್ಯಾಪಾರ ಕುದುರಿಸುವ ಸಲುವಾಗಿ ಕೆಲವು ದಿನ ಚರ್ಮ ಅಪ್ಪಾಜಿಯ ಮನೆಯಲ್ಲಿ ಇರಿಸಿಕೊಳ್ಳಲಾಗಿದೆ. ಮೊದಲಿಗೆ ವ್ಯಾಪಾರಿಯೊಂದಿಗೆ ರೂ.೫ಲಕ್ಷಕ್ಕೆ ವ್ಯಾಪಾರ ಕುದುರಿದೆ. ಆದರೆ, ಮತ್ತೋರ್ವ ವ್ಯಾಪಾರಿ ರೂ. ೮ಲಕ್ಷಕ್ಕೆ ವ್ಯಾಪಾರ ಕುದುರಿಸಿದಾಗ ಅಸಮಾಧಾನಗೊಂಡ ಮೊದಲನೇ ವ್ಯಾಪಾರಿಯೇ ಇಲಾಖೆಗೆ ಮಾಹಿತಿ ನೀಡಿರಬಹುದೆಂದು ಹೇಳಲಾಗುತ್ತಿದೆ.., ಪ್ರಕರಣದ ಬಗ್ಗೆ ನಾಗರಹೊಳೆ ವಲಯದ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ..!
?ಸಂತೋಷ್