ಸಿದ್ದಾಪುರ, ಫೆ. ೧೮: ಓ.ಡಿ.ಪಿ. ಸಂಸ್ಥೆ ಹಾಗೂ ಅಂದೇರಿ ಹಿಲ್ ಜರ್ಮನಿ ಇವರ ಸಹಯೋಗದೊಂದಿಗೆ ಪಾಲಿಬೆಟ್ಟದಲ್ಲಿ ಗೊಬ್ಬರ ವಿತರಣಾ ಕಾರ್ಯಕ್ರಮವು ಪಾಲಿಬೆಟ್ಟ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓ.ಡಿ.ಪಿ. ಸಂಸ್ಥೆಯ ಪ್ರಮುಖ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಓ.ಡಿ.ಪಿ. ಸಂಸ್ಥೆಯು ರೈತರ ಏಳಿಗೆಗಾಗಿ ಸಹಕಾರ ನೀಡುತ್ತಿದೆ ಎಂದರು. ರೈತರ ಉತ್ತೇಜನಕ್ಕಾಗಿ ಸಂಸ್ಥೆಯಿAದ ನೋಂದಾಯಿತ ರೈತರಿಗೆ ಉಚಿತ ಗೊಬ್ಬರ ನೀಡಲಾಗುತ್ತಿದೆ ಎಂದು ಪ್ರಶಾಂತ್ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನೋಂದಾಯಿತ ೫೧ ಮಂದಿ ರೈತರಿಗೆ ಗೊಬ್ಬರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಓ.ಡಿ.ಪಿ. ಸಂಯೋಜಕಿ ಮೋಳಿ ಓ.ಡಿ.ಪಿ. ಸಂಸ್ಥೆಯ ಪದಾಧಿಕಾರಿಗಳಾದ ಜಾಯಿಸ್ ಮಿನೇಜಸ್ ಗ್ರಾ.ಪಂ. ಸದಸ್ಯರಾದ ಬೋಪಣ್ಣ, ಪಿ.ಡಿ.ಓ. ವಿಶ್ವನಾಥ್, ವಿಜಯನಾರಾಯಣ, ಕಾರ್ಮಿಕ ಇಲಾಖಾಧಿಕಾರಿ ಅನಿಲ್ ಹಾಜರಿದ್ದರು.