ಸುಂಟಿಕೊಪ್ಪ, ಫೆ. ೧೮: ಜಲ ಮೂಲಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತಿರು ವುದರಿಂದ ಜಲಕ್ಷಾಮ ಕಾಡುತ್ತಿದ್ದು ಮಿತವಾಗಿ ನೀರನ್ನು ಬಳಸಬೇಕು ಎಂದು ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ಹೇಳಿದರು.

ನೆಹರು ಯುವ ಕೇಂದ್ರ ಮಡಿಕೇರಿ, ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಷನ್ ಇಬ್ನಿವಳವಾಡಿ ಗ್ರಾಮದ ಸಂಯುಕ್ತ ಆಶ್ರಯದಲ್ಲಿ ಬೊಯಿಕೇರಿ ಸಮುದಾಯಭವನದಲ್ಲಿ ಆಯೋಜಿಸಲಾಗಿದ್ದ ಜಲ ಜಾಗರಣಾ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಬೆಂಗಳೂರು ಮಹಾನಗರದಲ್ಲಿ ಅಧಿಕ ಬೋರ್‌ವೆಲ್ ಕೊರೆತದಿಂದ ನೀರಿನ ಅಭಾವ ತಲೆದೋರಿದೆ, ಕೊಡಗಿನಲ್ಲಿ ಚೆಕ್‌ಡ್ಯಾಂ, ಇಂಗು ಗುಂಡಿಗಳನ್ನು ಹೆಚ್ಚಾಗಿ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಉತ್ತಮ ಭವಿಷ್ಯಕ್ಕಾಗಿ ಜಲ ಸಂರಕ್ಷಣೆ ಕುರಿತು ಟಿ.ಜಿ. ಪ್ರೇಮ್‌ಕುಮಾರ್ ಮಾತನಾಡಿ, ನೀರು ಅತ್ಯಮೂಲ್ಯವಾಗಿದ್ದು ನೀರಿನ ದುರ್ಬಳಕ್ಕೆ ಸಲ್ಲ ಎಂದರು.

ನೆಹರು ಯುವ ಕೇಂದ್ರದ ಸಂಯೋಜಕ ಟಿ.ಟಿ. ಜಯಣ್ಣ ಮಾತನಾಡಿ, ಪ್ರಧಾನಿ ಮೋದಿ ಅವರ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಇಬ್ನಿವಳವಾಡಿ ಗ್ರಾಮಕ್ಕೆ ಲಭಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರರಾದ ನಂದಿನೆರವAಡ ಕೆ. ನಂದ ವಹಿಸಿದ್ದರು.

ಪಿ.ಸಿ. ಕೃಷ್ಣಪ್ಪ ನೀರಿನ ಮಹತ್ವದ ಬಗ್ಗೆ ಮಾತನಾಡಿದರು. ಗಣೇಶ ಸ್ವಾಗತಿಸಿ, ಪಿ.ಎಸ್. ದಿನೇಶ್ ವಂದಿಸಿದರು.