ಚೆಟ್ಟಳ್ಳಿ, ಫೆ. ೧೮: ನಜುಮುಲ್ ಹುದಾ ಯೂತ್ ಅಸೋಸಿಯೇಷನ್ ಎಡಪಾಲ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಎನ್.ಹೆಚ್. ಎಂ. ಹಾಲ್‌ನಲ್ಲಿ ನಡೆಯಿತು. ಕಳೆದ ಹನ್ನೊಂದು ವರ್ಷಗಳಿಂದ ಯುವಕರನ್ನು ಒಂದುಗೂಡಿಸಿ, ಊರಿನ ಅಭಿವೃದ್ಧಿ ಹಾಗೂ ಬಡ ರೋಗಿಗಳ ಸಹಾಯ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ.

ಕೋವಿಡ್ ಸಮಯದಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ, ಬಡ ಹೆಣ್ಣು ಮಕ್ಕಳ ವಿವಾಹ, ರೋಗಿಗಳಿಗೆ ಸಹಾಯ, ಬೀದಿ ದೀಪ ದುರಸ್ತಿ ಇತ್ಯಾದಿ ಎಲ್ಲಾ ಒಳ್ಳೆಯ ಕಾರ್ಯಗಳನ್ನು ವಾರ್ಷಿಕ ಮಹಾಸಭೆಯಲ್ಲಿ ಹಾಜರಿದ್ದ ಹಿರಿಯರು ಶ್ಲಾಘನೆ ವ್ಯಕ್ತಪಡಿಸಿದರು. ಅಧ್ಯಕ್ಷರಾಗಿ ಬಶೀರ್ ಸಿ.ಎ ಪ್ರಧಾನ ಕಾರ್ಯದರ್ಶಿಯಾಗಿ ಜಲೀಲ್ ಕೆ.ಎಂ, ಉಪಾಧ್ಯಕ್ಷರಾಗಿ ಹಾರಿಸ್ ಬಾಖವಿ, ಸಹ ಕಾರ್ಯದರ್ಶಿಯಾಗಿ ಸಲೀಮ್ ಕೆ.ಎಸ್, ಹನೀಫ್ ವೈ.ಹೆಚ್ ಖಜಾಂಚಿಯಾಗಿ ಷಂಶುದ್ದೀನ್, ಎಂ.ಕೆ. ನಿರ್ದೇಶಕರುಗಳಾಗಿ ಅಬ್ದುಲ್ ರೆಹಮಾನ್, ಸಮದ್ ಕೆ.ಇ, ರಫೀಕ್, ಆಡಳಿತ ಮಂಡಳಿ ಸದಸ್ಯರಾಗಿ ರಶೀದ್, ಸಲೀಮ್, ಮಜೀದ್, ಜಂಷೀರ್, ಜುನೈದ್, ಶಿಯಾಬ್ ಆಯ್ಕೆಯಾಗಿದ್ದಾರೆ