ಮಡಿಕೇರಿ, ಫೆ. ೧೮: ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಶುಕ್ರವಾರ ಕೂಡ ಕಾಲೇಜು ಎದುರು ಪ್ರಾಂಶುಪಾಲರು, ಉಪನ್ಯಾಸಕರೊಂದಿಗೆ ವಿದ್ಯಾರ್ಥಿನಿಯರು ವಾಗ್ವಾದ ನಡೆಸಿದ್ದಾರೆ. ಹಿಜಾಬ್ ನಿರಾಕರಣೆ ಹಿನ್ನೆಲೆ ತರಗತಿಗೆ ಹಾಜರಾಗದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜಿನಿಂದ ಹೊರಗೆ ಕಳುಹಿಸಿದ ಘಟನೆ ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ತರಗತಿಗೆ ಹೋಗಲು ಅವಕಾಶ ನೀಡುವಂತೆ ಪ್ರಾಂಶುಪಾಲರಾದ ವಿಜಯ್ ಅವರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭ ಕಾಲೇಜಿನಲ್ಲಿ ಹಿಜಾಬ್ ತೆಗೆದಿಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದು, ಹಿಜಾಬ್ ಬಿಚ್ಚಿಟ್ಟು ತರಗತಿಗೆ ಹಾಜರಾಗುವಂತೆ ವಿಜಯ ಸೂಚಿಸಿದರು. ಆದರೆ ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದ ಹಿನ್ನೆಲೆ ವಿದ್ಯಾರ್ಥಿನಿಯರು ಹಾಗೂ ಪ್ರಾಂಶುಪಾಲರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.
ಹೈಕೋರ್ಟ್ ಆದೇಶ ಪಾಲಿಸಲು ಆಗಲ್ಲ ಎಂದ ವಿದ್ಯಾರ್ಥಿನಿಯರ ಮೇಲೆ ಕಿಡಿಕಾರಿದ ಪ್ರಾಂಶುಪಾಲರು, ಕೂಡಲೇ ಕಾಲೇಜಿನಿಂದ ಹೊರನಡೆಯುವಂತೆ ಸೂಚಿಸಿದ್ದಾರೆ. ಈ ಸಂದರ್ಭ ಹಾಜರಾತಿ ನೀಡಿದರೆ ಮನೆಗೆ ಹೋಗುತ್ತೇವೆ ಎಂದು ವಿದ್ಯಾರ್ಥಿನಿಯರು ಹಠ ಹಿಡಿದರು. ಹಿಜಾಬ್ ಬಿಟ್ಟಿಚ್ಚು ಬರುವುದಾದರೆ ತರಗತಿಗೆ ಬನ್ನಿ, ಇಲ್ಲವಾದರೆ ವಾಪಾಸ್ ಹೋಗಿ. ಯಾವುದೇ ಕಾರಣಕ್ಕೂ ಹಾಜರಾತಿ ಕೊಡಲು ಸಾಧ್ಯವೇ ಇಲ್ಲ ಎಂದು ಪ್ರಾಂಶುಪಾಲ ವಿಜಯ್ ಎಂದು ಹೇಳಿದರು.
ಈ ಸಂದರ್ಭ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿದ್ಯಾರ್ಥಿನಿಯರು ನಾವು ಹೋಗುವುದಿಲ್ಲ. ಇಲ್ಲಿಯೇ ಪ್ರತಿಭಟನೆ ಮಾಡುತ್ತೇವೆ ಎಂದಾಗ ಗರಂ ಆದ ಪ್ರಾಂಶುಪಾಲರು ಇವರನ್ನು ಬಂಧಿಸಿ ಎಫ್.ಐ.ಆರ್. ಮಾಡಿ ಎಂದು ಪೊಲೀಸರಿಗೆ ಹೇಳಿದರು. ಬಳಿಕ ಹೊರಹೋದ ಸುಮಾರು ೧೦ ವಿದ್ಯಾರ್ಥಿಗಳು, ಕಾಲೇಜಿನ ಗೇಟ್ ಮುಂಭಾಗ ಸಂಜೆ ತನಕ ಪ್ರತಿಭಟನೆ ನಡೆಸಿದರು.
ಫೀ.ಮಾ. ಕಾರ್ಯಪ್ಪ ಕಾಲೇಜು
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದು ಪ್ರವೇಶ ನಿರ್ಬಂಧ ಹಿನ್ನೆಲೆ ಮನೆಗೆ ಹಿಂತಿರುಗಿದರು. ವಿದ್ಯಾರ್ಥಿನಿಯರಿಗೆ ಬೆಂಬಲ ಸೂಚಿಸಿ ೨೦ಕ್ಕೂ ಅಧಿಕ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದರು. ವಿದ್ಯಾರ್ಥಿಗಳು ಪ್ರತಿಭಟನೆಗೆ ಯತ್ನಿಸಿದರಾದರೂ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.
ಸುಂಟಿಕೊಪ್ಪ: ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತು ಪಾಠಪ್ರವಚನಗಳನ್ನು ಕೇಳಲು ಅವಕಾಶ ನೀಡಬೇಕೆಂದು ಹಠ ಹಿಡಿದ ೮ ಮಂದಿ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜಿನಿಂದ ಹೊರಕಳಿಸುತ್ತಿದ್ದಂತೆ ೨೦ ಮಂದಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರನ್ನು ಬೆಂಬಲಿಸಿ ಕಾಲೇಜಿನಿಂದ ಹೊರನಡೆದ ಘಟನೆ ನಡೆದಿದೆ.
ಶುಕ್ರವಾರ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಎಂದಿನAತೆ ಕಾಲೇಜಿನ ತರಗತಿಗಳಿಗೆ ತೆರಳಿದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪಾಠ ಪ್ರವಚನದಲ್ಲಿ ತೊಡಗಿಸಿಕೊಳ್ಳುವಂತೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮನವಿ ಮಾಡಿದರು. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಇರುವುದಾಗಿ ಪ್ರಾಂಶುಪಾಲರೊAದಿಗೆ ವಾದ ಮಂಡಿಸಿದರು. ಹಿಜಾಬ್ ಧರಿಸಿ ಪಾಠ ಪ್ರವಚನದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಮತ್ತು ಸರಕಾರದ ಆದೇಶವೇ ಇದೆ ಮುಂದಿನ ಆದೇಶ ಬರುವವರೆಗೂ ಇದನ್ನೇ ನಾವೆಲ್ಲಾರೂ ಪಾಲಿಸಬೇಕಾಗಿದೆ ಎಂದು ಪ್ರಾಚಾರ್ಯರು ತಿಳಿ ಹೇಳಿದರು. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರ ಬಂದರು.
ನಂತರ ಕಾಲೇಜಿನ ಗೇಟಿನ ಮುಂಭಾಗದಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಹಿಡಿದು ನಿಂತಾಗ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮಂಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಮನೆಗೆ ಕಳುಹಿಸಿದ ಪ್ರಸಂಗ ನಡೆಯಿತು.
ಶನಿವಾರಸಂತೆ : ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಪಟ್ಟು ೩೪ ವಿದ್ಯಾರ್ಥಿನಿಯರ ಪೈಕಿ ಇಂದು ಬೆಳಿಗ್ಗೆ ೧೫ ಮಂದಿ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಹಿಜಾಬ್ ಧರಿಸಿ ಶಾಲೆ ಪ್ರವೇಶಕ್ಕೆ ಪ್ರಯತ್ನಿಸಿದರು. ಶಾಲೆಯ ಪ್ರಾಂಶುಪಾಲರಾದ ಶಿವಪ್ರಕಾಶ್, ಹಿರಿಯ ಶಿಕ್ಷಕರುಗಳಾದ ಕೆ.ಪಿ. ಜಯಕುಮಾರ್, ಪ್ರಮೋದ್ಕುಮಾರ್ ಅವರುಗಳು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿ, ಶಾಲಾ ಗೇಟ್ ಪಕ್ಕದಲ್ಲೇ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿದ್ದರೂ, ಅದಕ್ಕೂ ಒಪಲಿಲ್ಲ. ಹಿಜಾಬ್ ತೆಗೆದು ಬರಲು ಸಾಧ್ಯವೇ ಇಲ್ಲ ಎಂಬ ವಾದದೊಂದಿಗೆ ವಾಗ್ವಾದ ನಡೆಸಿ, ೧೫ ಮಂದಿ ವಿದ್ಯಾರ್ಥಿನಿಯರು ಮನೆಗೆ ತೆರಳಿದರು. ಸ್ಥಳದಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿನಿಯರ ಪೋಷಕರುಗಳನ್ನು ಶಾಂತಿಯುತವಾಗಿ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾದರು.ಸಿದ್ದಾಪುರ: ಹಿಜಾಬ್ ಧರಿಸಿ ಬಂದ ೭೨ ವಿದ್ಯಾರ್ಥಿನಿಯರನ್ನು ಇಂದೂ ಕೂಡ ಶಾಲಾ-ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿದೆ. ನೆಲ್ಲಿಹುದಿಕೇರಿಯಲ್ಲಿ ಪ್ರವೇಶ ನಿರಾಕರಣೆ ಮುಂದುವರೆದಿದೆ. ನೆಲ್ಲಿಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ೮, ೯ ಮತ್ತು ೧೦ನೇ ತರಗತಿಯ ೩೨ ವಿದ್ಯಾರ್ಥಿನಿಯರು ಹಾಗೂ ನೆಲ್ಲಿಹುದಿಕೇರಿ ಪದವಿಪೂರ್ವ ಕಾಲೇಜಿನ ೪೦ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಆದರೆ ಹೈಕೋರ್ಟಿನ ಮಧ್ಯಂತರ ಆದೇಶ ಇರುವುದರಿಂದ ಶಾಲಾ-ಕಾಲೇಜಿನ ಕೊಠಡಿಗೆ ಪ್ರವೇಶ ನಿರಾಕರಿಸಿದರು. ೭೨ ವಿದ್ಯಾರ್ಥಿನಿಯರು ತರಗತಿಯ ಹೊರಗೆ ಕುಳಿತಿರುವುದು ಕಂಡುಬAದಿದೆ.
ಆದೇಶ ಪಾಲನೆ
ಗೋಣಿಕೊಪ್ಪ: ಬಾಳೆಲೆ ವಿಜಯಲಕ್ಷಿ÷್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶುಕ್ರವಾರ ಹಿಜಾಬ್ ಬಿಚ್ಚಿಟ್ಟು ಬಂದು ಶಿಸ್ತು ಮೂಡಿಸಿದರು. ಬಸ್ ಇಳಿದು ಬಂದ ವಿದ್ಯಾರ್ಥಿನಿಯರು ಮುಖ್ಯದ್ವಾರದ ಹೊರಗಡೆ ಹಿಜಾಬ್ ಕಳಚಿ ಒಳಬಂದರು. ಬುಧವಾರ ಹಿಜಾಬ್ ಧರಿಸಿ ತರಗತಿಗೆ ಸೇರಲು ಹಠ ಮಾಡಿ, ಅವಕಾಶ ನೀಡದ ಕಾರಣ ನಂತರ ಕಳಚಿಟ್ಟು ತರಗತಿಗೆ ಸೇರಿದ್ದರು. ಗುರುವಾರ ಆಡಳಿತ ಮಂಡಳಿಯಿAದ ಸಮವಸ್ತç ಪಾಲನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಗಿತ್ತು.