ಮಡಿಕೇರಿ, ಫೆ. ೧೮: ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗ ಮತ್ತು ಗ್ರಾಮೀಣ ಕುಡಿಯುವ ವಿಭಾಗದಲ್ಲಿ ಕೈಗೊಂಡ ಕಾಮಗಾರಿಗಳ ಪೈಕಿ ಗುತ್ತಿಗೆದಾರರಿಗೆ ಒಟ್ಟು ರೂ. ೧೬೪ ಕೋಟಿ ಹಣ ಸಂದಾಯವಾಗಲು ಬಾಕಿ ಉಳಿದಿದೆ. ಈ ಬಗ್ಗೆ ಮೇಲ್ಮನೆಯಲ್ಲಿ ಪ್ರಶ್ನಿಸಿದ ಶಾಂತೆಯAಡ ವೀಣಾ ಅಚ್ಚಯ್ಯ ಅವರಿಗೆ ಉತ್ತರಿಸಿದ ಗ್ರಾಮಿಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಜಿಲ್ಲೆಯಲ್ಲಿ ಪಂಚಾಯತ್ ರಾಜ್ ವಿಭಾಗದಲ್ಲಿ ಒಟ್ಟು ರೂ. ೪೬೪೦ ಲಕ್ಷ ಅನುದಾನದಲ್ಲಿ ರೂ. ೨೮೯೮.೮೯ ಲಕ್ಷ ಅನುದಾನ ಬಿಡುಗಡೆಯಾಗಿ ಈ ಮೊತ್ತ ಉದ್ದೇಶಿತ ಯೋಜನೆಗಳಿಗೆ ವೆಚ್ಚವಾಗಿರುತ್ತದೆ.

ಉಳಿದಂತೆ ಗುತ್ತಿಗೆದಾರನಿಗೆ ಸಂದಾಯವಾಗಲು ರೂ ೧೬೪೦ ಲಕ್ಷ (ರೂ.೧೬೪ ಕೋಟಿ) ಬಾಕಿ ಇದೆ. ಎಸ್.ಡಿ.ಆರ್.ಎಫ್. ಮಳೆಹಾನಿ ಯೋಜನೆಯಡಿ ರೂ ೪,೦೦೦ ಲಕ್ಷ ಮತ್ತು ಹೆಚ್ಚುವರಿಯಾಗಿ ರೂ. ೫೦೦ ಲಕ್ಷ ಅನುದಾನ ಪೈಕಿ ರೂ ೨,೭೦೦ ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಗುತ್ತಿಗೆದಾರರಿಗೆ ಈ ಹಣ ಪಾವತಿ ಮಾಡಲಾಗಿದೆ. ಬಾಕಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

(ಮೊದಲ ಪುಟದಿಂದ) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಒಟ್ಟು ರೂ. ೯ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಹಣ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು. ಪೂರ್ಣಗೊಂಡ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಬಿಲ್ ಪಾವತಿಗೆ ಕ್ರಮವಹಿಸ ಲಾಗುವುದು ಎಂದು ಗ್ರಾಮೀಣಾ ಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.

ಖಾಲಿ ಹುದ್ದೆ

ಈ ಎರಡು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ವೀಣಾ ಅಚ್ಚಯ್ಯ ಮಾಹಿತಿ ಕೋರಿದರು. ಇದಕ್ಕೆ ಉತ್ತರಿಸಿದ ಈಶ್ವರಪ್ಪ ಅವರು, ಪಂಚಾಯತ್ ರಾಜ್ ಇಲಾಖೆಗೆ ಮಂಜೂರಾದ ೫೨ ಹುದ್ದೆಗಳ ಪೈಕಿ ೨೨ ಹುದ್ದೆ ಭರ್ತಿಯಾಗಿದ್ದು, ೩೦ ಹುದ್ದೆಗಳು ಖಾಲಿ ಇವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ೫೬ ಹುದ್ದೆಗಳ ಪೈಕಿ ೧೦ ಹುದ್ದೆಗಳು ಭರ್ತಿಯಾಗಿದ್ದು, ೪೬ ಖಾಲಿ ಹುದ್ದೆಗಳಿವೆ ಎಂದು ವಿವರಿಸಿದರು.