ಮಡಿಕೇರಿ, ಫೆ. ೧೭: ರೋಗಿಯೊಬ್ಬರ ಚಿಕಿತ್ಸೆಗೆ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬAಧಿಸಿ ದಂತೆ ವೈದ್ಯಾಧಿಕಾರಿಯೊಬ್ಬರನ್ನು ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ವೀರಾಜಪೇಟೆ ಕುಕ್ಲೂರು ಗ್ರಾಮದ ಕೆ.ಎ. ಲಲಿತಾ ಎಂಬವರ ಪತಿಯ ಅಪೆಂಡಿಕ್ಸ್ ಶಸ್ತç ಚಿಕಿತ್ಸೆಗಾಗಿ ೫ ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದ ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಜನರಲ್ ಸರ್ಜನ್ ಡಾ. ವಿಶ್ವನಾಥ ಶಿಂಪಿ ಅವರ ವಿರುದ್ಧ ಲಲಿತಾ ಅವರು ನೀಡಿದ್ದ ದೂರಿನನ್ವಯ ಎಸಿಬಿ ಪೊಲೀಸರು ವಿಶ್ವನಾಥ ಶಿಂಪಿ ಅವರನ್ನು ಲಂಚ ಸ್ವೀಕರಿಸುವ ವೇಳೆ ಬಂಧಿಸಿ ತಾ. ೯.೧೨.೨೦೨೧ ರಿಂದ ತಾ. ೨೩.೧೨.೨೦೨೧ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಬಳಿಕ ವಿಶ್ವನಾಥ್ ಶಿಂಪಿ ಅವರನ್ನು ಪ್ರಸ್ತುತ ಇರುವ ಹುದ್ದೆಯಲ್ಲೆ ಮುಂದುವ ರಿಸಿದರೆ ತನಿಖೆಗೆ ಅವಶ್ಯವಿರುವ ದಾಖಲಾತಿಗಳನ್ನು ನಾಶಪಡಿಸಿ ಸಾಕ್ಷಿಗಳನ್ನು ಬೆದರಿಸುವ ಸಾಧ್ಯತೆಗಳಿ ರುವುದರಿಂದ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಹಾಗೂ ಅವರನ್ನು ಬದಲಾವಣೆ ಮಾಡುವಂತೆ ಭ್ರಷ್ಟಾಚಾರ ನಿಗ್ರಹದಳ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರಕಾರ ವಿಶ್ವನಾಥ್ ಶಿಂಪಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಅಲ್ಲದೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಎಕ್ಸಂಬ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಜನರಲ್ ಸರ್ಜನ್ ಹುದ್ದೆಯಲ್ಲಿ ಲೀನ್ನ್ನು ನೀಡಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಸೂಚಿಸಿದೆ ಎಂದು ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ಕುಮಾರ್ ಸ್ವಾಮಿ ಆದೇಶದಲ್ಲಿ ತಿಳಿಸಿದ್ದಾರೆ.