ಕೂಡಿಗೆ, ಫೆ. ೧೬: ಕುಶಾಲನಗರದ ನಾಡ ಕಚೇರಿಯಲ್ಲಿ ಉಪ ವಿಭಾಗಧಿಕಾರಿ ಮತ್ತು ತಹಶೀಲ್ದಾರ್ ನಿರ್ದೇಶನದಂತೆ ಕುಶಾಲನಗರದ ಉಪ ತಹಶೀಲ್ದಾರ್ ಕಚೇರಿಯಲ್ಲಿ ಪಿಂಚಣಿ ಅದಾಲತ್ ನಡೆದು ೩೭ ಫಲಾನುಭವಿಗಳಿಗೆ ಪಿಂಚಣಿ ಅದಾಲತ್ ಮಂಜೂರಾತಿ ಅದೇಶ ಪತ್ರವನ್ನು ನೀಡಲಾಯಿತು.
ಈ ಸಂದರ್ಭ ನಾಡ ಕಚೇರಿ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ್ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಸಚಿನ್, ಗೌತಮ್ ಸೇರಿದಂತೆ ಅರ್ಹ ಫಲಾನುಭವಿಗಳು ಹಾಜರಿದ್ದರು.