ಸೋಮವಾರಪೇಟೆ,ಫೆ.೧೬: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿಗೆ ತೊಂದರೆಯಾಗಿದ್ದು ಸಂಬAಧಪಟ್ಟವರು ಗಮನಹರಿಸಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸುತ್ತಮುತ್ತಲ ನಿವಾಸಿಗಳಿಗೆ ಕಳೆದ ಒಂದು ವಾರದಿಂದ ನೀರಿಲ್ಲದೆ ಪಕ್ಕದ ಹೊಳೆಯನ್ನು ಅವಲಂಬಿಸುವAತಾಗಿದೆ. ಶಾಲೆಯಲ್ಲಿ ಬಿಸಿಯೂಟ ತಯಾರಿಸಲು, ಕುಡಿಯುವ ನೀರು ಹಾಗೂ ಶೌಚಾಲಯ ಬಳಕೆಗೆ ತೀವ್ರ ತೊಂದರೆಯಾಗಿದೆ. ಸಂಬAಧಪಟ್ಟವರಲ್ಲಿ ವಿಚಾರಿಸಿದರೆ ಮೋಟಾರ್ ರಿಪೇರಿಯಾಗಿದೆಯೆಂದು ಉತ್ತರ ನೀಡುತ್ತಿದ್ದಾರೆ. ಕನಿಷ್ಟ ಮೋಟಾರ್ ರಿಪೇರಿ ಮಾಡಿಸಿ ಕುಡಿಯುವ ನೀರು ಒದಗಿಸಲು ಪಂಚಾಯಿತಿಗೆ ಆಗುತ್ತಿಲ್ಲವೇ? ತಕ್ಷಣವೇ ಸಮಸ್ಯೆಯನ್ನು ಪರಿಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.