ಕರಿಕೆ, ಫೆ. ೧೭: ಜಿಲ್ಲೆಯ ತಲಕಾವೇರಿ ವನ್ಯದಾಮದಂಚಿನ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಭಾಗಮಂಡಲ-ಕರಿಕೆ ಅಂತರ್ ರಾಜ್ಯ ಹೆದ್ದಾರಿಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಒಂಟಿ ಸಲಗವೊಂದು ರಸ್ತೆ ಬದಿಯಲ್ಲಿರುವ ಬೈನೆ ಮರ ಸೇರಿದಂತೆ ಇತರ ಕಾಡುಮರಗಳನ್ನು ಆಹಾರಕ್ಕಾಗಿ ರಸ್ತೆಗೆ ಉರುಳಿಸುತ್ತಿದ್ದು ಇದರಿಂದ ಪ್ರಯಾಣಿಕರು ಹಗಲು, ರಾತ್ರಿ ಪ್ರಾಣ ಭಯದಿಂದ ಸಂಚರಿಸುವAತಾಗಿದೆ. ಕಾಡಿನಲ್ಲಿ ನೀರು ಹಾಗೂ ಆಹಾರದ ಕೊರತೆಯಿಂದ ರಸ್ತೆ ಬದಿಯಲ್ಲಿ ಹೇರಳವಾಗಿ ಬೆಳೆದಿರುವ ವಾಟೆ ಬಿದಿರು, ಬೆತ್ತ, ಬೈನೆ ಮರದತ್ತ ಆಕರ್ಷಿತವಾಗಿ ರಸ್ತೆ ಬದಿಯಲ್ಲಿ ಆನೆ ಬೀಡುಬಿಟ್ಟಿರುವುದಾಗಿ ಅರಣ್ಯ ಇಲಾಖೆ ‘ಶಕ್ತಿ’ಗೆ ಮಾಹಿತಿ ನೀಡಿದೆ.
-ಸುಧೀರ್ ಹೊದ್ದೆಟ್ಟಿ