ಕೂಡಿಗೆ, ಫೆ. 17: ರಾಜ್ಯ ಸರ್ಕಾರದ ಹೊಸ ನಿಯಮಾನುಸಾರವಾಗಿ ಜಿಲ್ಲೆಗೊಂದು ಮಿನಿ ವಿಮಾನ ನಿಲ್ದಾಣ ಮಾಡುವ ಯೋಜನೆಯಡಿಯಲ್ಲಿ ಕಳೆದ 5 ವರ್ಷಗಳಿಂದಲೂ ವಿಮಾನಯಾನ ಇಲಾಖೆಯ ಅಧಿಕಾರಿಗಳು ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ವರ್ಗದವರು ಕೂಡಿಗೆ ಕೃಷಿ ಕ್ಷೇತ್ರದ ಜಾಗವನ್ನು ವೀಕ್ಷಣೆ ಮಾಡಿ ತೆರಳಿ ಸರಕಾರಕ್ಕೆ ವರದಿಯನ್ನು ನೀಡಿದರು.
ಅದರಂತೆ ಜಿಲ್ಲಾಧಿಕಾರಿ ಡಾ. ಸತೀಶ ಅವರು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಕೂಡಿಗೆ ಕೃಷಿ ಕ್ಷೇತ್ರ ಆವರಣದಲ್ಲಿರುವ 56 ಎಕರೆಗಳಷ್ಟು ಪ್ರದೇಶದ ಜಾಗವನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ಕಂದಾಯ ಪರಿವೀಕ್ಷಕ ಸಂತೋಷ್, ಕೂಡಿಗೆ ವಿಭಾಗದ ಲೆಕ್ಕಾಧಿಕಾರಿ ಗುರುದರ್ಶನ್ ಹಾಜರಿದ್ದರು.