ಕುಶಾಲನಗರ, ಫೆ. 17: ಮಾರ್ಚ್ 3 ರಿಂದ ಬೈಲುಕುಪ್ಪೆ ಗೋಲ್ಡನ್ ಟೆಂಪಲ್ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಕಳೆದ 700 ದಿನಗಳಿಂದ ಮುಚ್ಚಲ್ಪಟ್ಟಿದ್ದ ಗೋಲ್ಡನ್ ಟೆಂಪಲ್ ಇದೀಗ ತೆರೆಯಲು ನಿರ್ಧರಿಸಿರುವುದಾಗಿ ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 3ರಿಂದ ಟಿಬೆಟಿಯನ್ ನೂತನ ವರ್ಷ ಲೋಸರ್ ಆರಂಭವಾಗಲಿದೆ. ವಿಶ್ವಶಾಂತಿ ಹಾಗೂ ಕೊರೊನಾ ಮುಕ್ತ ವಿಶ್ವ ಸೃಷ್ಟಿ ಆಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.