ಗೋಣಿಕೊಪ್ಪಲು, ಫೆ. ೧೬: ರಸ್ತೆ ಬದಿಯಲ್ಲಿ ಕಸ ಎಸೆಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಾತೂರು ಗ್ರಾಮ ಪಂಚಾಯಿತಿ ನಿರ್ಧರಿಸಿದೆ.

ಗೋಣಿಕೊಪ್ಪ ಸಮೀಪದ ಪಾಲಿಬೆಟ್ಟ ಮುಖ್ಯರಸ್ತೆಯ ಎರಡು ಬದಿಯಲ್ಲಿ ನಾಗರಿಕರು ನಿರಂತರವಾಗಿ ಕಸವನ್ನು ಎಸೆಯುವ ಮೂಲಕ ಅಲ್ಲಿನ ಪರಿಸರವನ್ನು ಹಾಳುಗೆಡವಿದ್ದರು. ಇದರಿಂದ ಎಚ್ಚೆತ್ತ ಪಂಚಾಯಿತಿ ಆಡಳಿತ ಮಂಡಳಿ ದಿನಪೂರ್ತಿ ರಸ್ತೆಯ ಎರಡು ಬದಿಯಲ್ಲಿದ್ದ ಕಸವನ್ನು ತೆಗೆದು ಶುಚಿಗೊಳಿಸಿದರು.

ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ ಮುಂದಾಳತ್ವದಲ್ಲಿ ಉಪಾಧ್ಯಕ್ಷರಾದ ಸುಮಾ ಹಾಗೂ ಸದಸ್ಯರು ಪಂಚಾಯಿತಿ ನೌಕರರ ಸಹಾಯದಿಂದ ಮುಂಜಾನೆಯಿAದಲೇ ಶುಚಿತ್ವ ಕಾರ್ಯ ನಡೆಸಿದರು.

ಕಸವನ್ನು ರಸ್ತೆ ಬದಿಯಲ್ಲಿ ಬಿಸಾಕಿ ತೆರಳುವವರನ್ನು ಪತ್ತೆಹಚ್ಚಲು ರಸ್ತೆಯ ಆಯಕಟ್ಟಿನ ಎರಡು ಬದಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಸ ನಿರ್ಮೂಲನೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.

ಈ ವೇಳೆ ಮಾತನಾಡಿದ ಕುಪ್ಪಂಡ ಗಿರೀಶ್ ಪೂವಣ್ಣ, ಗೋಣಿಕೊಪ್ಪ ನಗರಕ್ಕೆ ಹೊಂದಿಕೊAಡAತೆ ಪಾಲಿಬೆಟ್ಟ ರಸ್ತೆಯ ಉದ್ದಗಲಕ್ಕೂ ಕಸವನ್ನು ಬಿಸಾಡುತ್ತಿರುವುದರಿಂದ ಸುತ್ತಮುತ್ತಲಿನ ಪ್ರದೇಶವೂ ಹಾಳಾಗಿದೆ. ಇನ್ನು ಮುಂದೆ ಕಸವನ್ನು ಬಿಸಾಡುವವರನ್ನು ಕಂಡು ಹಿಡಿದು ದಂಡ ವಿಧಿಸಲಾಗುತ್ತದೆ.

ಕಸವನ್ನು ಬಿಸಾಡುವ ಬದಲು ಪಂಚಾಯಿತಿ ವಾಹನಕ್ಕೆ ಕಸವನ್ನು ವಿಂಗಡಿಸಿ ನೀಡಬೇಕು. ಪ್ರತಿದಿನ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹ ವಾಹನ ಸಂಚಾರ ಮಾಡಲಿದೆ ಎಂದರು.

ಪAಚಾಯಿತಿ ಸದಸ್ಯ ಗುಮ್ಮಟೀರ ದರ್ಶನ್ ಮಾತನಾಡಿ, ರಸ್ತೆ ಬದಿ ಕಸವನ್ನು ಬಿಸಾಡುವವರ ಮೇಲೆ ಕಠಿಣ ಕ್ರಮದೊಂದಿಗೆ ಅಂತಹ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಶುಚಿತ್ವ ಕಾರ್ಯದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಸುಮಾ, ಸದಸ್ಯರಾದ ಕುಲ್ಲಚಂಡ ಚಿಣ್ಣಪ್ಪ, ಪೊನ್ನಮ್ಮ, ಸುನೀತಾ ಮಂದಣ್ಣ, ರೂಪ, ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.