ಪೊನ್ನಂಪೇಟೆ, ಫೆ. ೧೬: ಬಾಳೆಲೆ ವಿಜಯಲಕ್ಷಿö್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ, ಹಿರಿಯ ಸಾಹಿತಿ ಡಾ. ಜೆ. ಸೋಮಣ್ಣ ಅವರನ್ನು ಜೆ.ಸಿ.ಐ. ಭಾರತದ ಸೀನಿಯರ್ ಮೆಂಬರ್ ಅಸೋಸಿಯೇಷನ್ (ಎಸ್.ಎಂ.ಎ.) ವತಿಯಿಂದ ಸನ್ಮಾನಿಸಲಾಯಿತು.
೩೨ ವರ್ಷಗಳ ಸುದೀರ್ಘ ಅವಧಿಯ ಸೇವೆಯಿಂದ ಜನವರಿ ಅಂತ್ಯಕ್ಕೆ ನಿವೃತ್ತಿಯಾದ ಡಾ. ಜೆ. ಸೋಮಣ್ಣ ಅವರನ್ನು ಗೋಣಿಕೊಪ್ಪಲಿನ ಅವರ ನಿವಾಸಕ್ಕೆ ತೆರಳಿದ ಎಸ್.ಎಂ.ಎ ವಲಯ ಮಂಡಳಿಯ ಮುಖ್ಯಸ್ಥರಾದ ಕೆ.ಎಸ್. ಕುಮಾರ್ ಅವರ ನೇತೃತ್ವದ ತಂಡ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿತು.
ಕಾರ್ಯಕ್ರಮದಲ್ಲಿ ಎಸ್.ಎಂ.ಎ. ರಾಷ್ಟಿçÃಯ ಮಂಡಳಿ ನಿರ್ದೇಶಕ ಎ.ಎಸ್. ನರೇನ್ ಕಾರ್ಯಪ್ಪ, ಯುವ ಮುಂದಾಳು ಆಪಟ್ಟೀರ ಟಾಟು ಮೊಣ್ಣಪ್ಪ ಎಸ್.ಎಂ.ಎ. ಸದಸ್ಯರು ಮತ್ತು ಸೋಮಣ್ಣ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.