ನಾಡೋಜ ಡಾ. ಚೆನ್ನವೀರ ಕಣವಿ ಇನ್ನಿಲ್ಲ

ಧಾರವಾಡ, ಫೆ. ೧೬: ಕನ್ನಡದ ಖ್ಯಾತ ಹಿರಿಯ ಸಾಹಿತಿ ಡಾ. ಚೆನ್ನವೀರ ಕಣವಿ (೯೩) ಅವರು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಣವಿ ಅವರನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಬುಧವಾರ ಬೆಳಿಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕವಿ ನಾಡೋಜ ಡಾ. ಚೆನ್ನವೀರ ಕಣವಿ ಅವರು ಕಳೆದೊಂದು ತಿಂಗಳಿನಿAದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿದ್ದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಜೂನ್ ೨೮,೧೯೨೮ ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಚೆನ್ನವೀರ ಕಣವಿಯವರು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ಪ್ರಸರಣ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಭಾವಜೀವಿ, ಸಮನ್ವಯ ಕವಿ ಎಂದೇ ಅವರು ಖ್ಯಾತಿಗಳಿಸಿದ್ದರು. ೧೯೪೯ರಲ್ಲಿ ಡಾ. ಚೆನ್ನವೀರ ಕಣವಿ ಮೊದಲ ಕವಲ ಸಂಕಲನ ಕಾವ್ಯಾಕ್ಷಿ ಬಿಡುಗಡೆಗೊಂಡಿತು. ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಂಪಿ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.

ಹಿಜಾಬ್ ವಿವಾದ-ವಿಚಾರಣೆ ಮುಂದೂಡಿಕೆ

ಬೆAಗಳೂರು, ಫೆ. ೧೬: ಕರ್ನಾಟಕ ಶಿಕ್ಷಣ ಕಾಯ್ದೆಯಾಗಲಿ ಅಥವಾ ಕಾಯ್ದೆಯಡಿಯಲ್ಲಿ ರಚಿಸಲಾದ ನಿಯಮಗಳಲ್ಲಾಗಲಿ ಯಾವುದೇ ಸಮವಸ್ತçವನ್ನು ಸೂಚಿಸಿಲ್ಲ ಎಂದು ಉಡುಪಿ ವಿದ್ಯಾರ್ಥಿಗಳ ಪರ ವಕೀಲರಾದ ರವಿವರ್ಮಕುಮಾರ್ ಕರ್ನಾಟಕ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು. ಹಿಜಾಬ್ ಕುರಿತು ಇಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆಎಂ ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠದ ವಿಚಾರಣೆ ಮುಂದುವರೆಸಿತು. ಈ ವೇಳೆ ವಾದ ಮಂಡಿಸಿದ ಈ ವೇಳೆ ಸರ್ಕಾರ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ವಿದ್ಯಾರ್ಥಿಗಳಿಗೆ ಸಮವಸ್ತçವನ್ನು ಸೂಚಿಸಲು ಸಾಧ್ಯವಿಲ್ಲ ವಕೀಲರು ವಾದ ಮಂಡಿಸಿದರು. ಟರ್ಬನ್ ಧರಿಸುವವರು ಸೇನೆಯಲ್ಲಿದ್ದಾರೆ, ಹಾಗಾದರೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದು ಯಾಕೆ ಬೇಡ? ಹಿಜಾಬ್ ಅನ್ನು ನಿಷೇಧಿಸುವುದು ಒಂದು ಕಠೋರ ನಿರ್ಧಾರವಾಗಿದ್ದು, ಇದು ಮುಸ್ಲಿಂ ಹುಡುಗಿಯರ ಶಿಕ್ಷಣಕ್ಕೆ ಧಕ್ಕೆ ಉಂಟು ಮಾಡುತ್ತದೆ. ಅವರ ಉಪಸ್ಥಿತಿಯು ಈಗ ತರಗತಿಗಳಲ್ಲಿ ತುಂಬಾ ಕಡಿಮೆಯಾಗಿದೆ. ಈ ವಿವಾದದಿಂದಾಗಿ ಭವಿಷ್ಯದಲ್ಲಿ ಮತ್ತಷ್ಟು ಕಡಿಮೆಯಾಗಬಹುದು ಎಂದು ಅವರು ವಾದಿಸಿದರು. ಬಳೆಗಳು, ಬಿಂದಿಗೆ, ಶಿಲುಬೆ ಮತ್ತು ಪೇಟ ಕೂಡ ಧಾರ್ಮಿಕ ಸಂಕೇತಗಳಾಗಿವೆ. ಆದರೆ ಇವುಗಳನ್ನು ಸರ್ಕಾರಿ ಆದೇಶದಲ್ಲಿ ಸೇರಿಸಲಾಗಿಲ್ಲ ಮತ್ತು ಇದು ಸಂಪೂರ್ಣವಾಗಿ ಧರ್ಮದ ಆಧಾರದ ಮೇಲೆ ತಾರತಮ್ಯ ಪ್ರಕರಣವಾಗಿದೆ ಎಂದು ಆರೋಪಿಸಿದರು. ಸುದೀರ್ಘ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ತಾ. ೧೭ಕ್ಕೆ (ಇಂದಿಗೆ) ಮುಂದೂಡಿತು.

ಬಪ್ಪಿ ಲಹಿರಿ ವಿಧಿವಶ

ಮುಂಬೈ, ಫೆ. ೧೬: ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ, ಹಿನ್ನೆಲೆ ಗಾಯಕ ಬಪ್ಪಿ ಲಹಿರಿ (೬೯) ಅನಾರೋಗ್ಯದಿಂದ ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಬಪ್ಪಿ ಲಹಿರಿ ತಮ್ಮ ಹಾಡುಗಳಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಡಿಸ್ಕೋ ಕಿಂಗ್ ಎಂದೇ ಕರೆಸಿಕೊಳ್ಳುತಿದ್ದ ಅವರಿಗೆ ೧೯೮೨ ರಲ್ಲಿ ತೆರೆಕಂಡ ಡಿಸ್ಕೋ ಡಾನ್ಸರ್ ಚಿತ್ರದ ಗೀತೆಗಳು ಅಪಾರ ಜನಪ್ರಿಯತೆ ಮತ್ತು ದೇಶಾದ್ಯಂತ ಅಭಿಮಾನಿಗಳನ್ನೂ ಸೃಷ್ಟಿಸಿದವು. ತಂದುಕೊಟ್ಟವು. ಹಿಂದಿಯಲ್ಲಿ ನಮಕ್ ಹಲಾಲ್, ಕಮಾಂಡೋ, ಡಾನ್ಸ್ ಡಾನ್ಸ್, ತೋಫಾ, ರಾತ್ ಬಾಕಿ, ಬಂಬಾಯ್ ಸೇ ಆಯಾ ಮೇರಾ ದೋಸ್ತ್ ಸೇರಿದಂತೆ ಹಲವಾರು ಹಿಟ್‌ಗಳನ್ನು ಅವರು ನೀಡಿದ್ದರು.

ಹಿಜಾಬ್ ಧರಿಸಲು ಅನುಮತಿ ಕೋರಿದ ವಿದ್ಯಾರ್ಥಿನಿಯರು ಗೈರು

ಬೆಂಗಳೂರು, ಫೆ. ೧೬: ಹಿಜಾಬ್ ಧರಿಸಲು ಮೊದಲು ಅನುಮತಿ ಕೇಳಿದ್ದ ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ೬ ವಿದ್ಯಾರ್ಥಿನಿಯರು ತಾ. ೧೬ ರಂದು ತರಗತಿಗಳಿಗೆ ಗೈರು ಹಾಜರಾಗಿದ್ದಾರೆ. ರಾಜ್ಯಾದ್ಯಂತ ಹಿಜಾಬ್ ವಿವಾದ ತೀವ್ರಗೊಂಡ ಕಾರಣದಿಂದ ಬಂದ್ ಆಗಿದ್ದ ಕಾಲೇಜು ಒಂದು ವಾರದ ನಂತರ ಪುನಾರಂಭಗೊAಡಿದೆ. ೬ ವಿದ್ಯಾರ್ಥಿನಿಯರು ಹಿಜಾಬ್ ಸಂಬAಧ ಹೈಕೋರ್ಟ್ ನೀಡಲಿರುವ ಅಂತಿಮ ತೀರ್ಪನ್ನು ಕಾದು ಆ ನಂತರ ತರಗತಿಗಳಿಗೆ ಹಾಜರಾಗುವ ಸಂಬAಧ ನಿರ್ಧರಿಸಲಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ತರಗತಿಗಳಲ್ಲಿ ಹಿಜಾಬ್ ಧರಿಸಲು ನಿರ್ಬಂಧಿಸಿದ್ದನ್ನು ವಿರೋಧಿಸಿದ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

ಉಕ್ರೇನ್‌ನಲ್ಲಿರುವ ಭಾರತೀಯರ ನೆರವಿಗಾಗಿ ಕಂಟ್ರೋಲ್ ರೂಂ ಸ್ಥಾಪನೆ

ನವದೆಹಲಿ, ಫೆ. ೧೬: ರಷ್ಯಾದೊಂದಿಗಿನ ಸಂಘರ್ಷದಿAದಾಗಿ ಪರಿಸ್ಥಿತಿ ಬಿಗಡಾಯಿಸುತ್ತಿರುವುದರ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮಾಹಿತಿ ಮತ್ತು ನೆರವು ಒದಗಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಕಂಟ್ರೋಲ್ ರೂಂ ಒಂದನ್ನು ಸ್ಥಾಪಿಸಿದೆ. ಜೊತೆಗೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ, ಅಲ್ಲಿನ ಭಾರತೀಯ ನಾಗರಿಕರಿಗಾಗಿ ೨೪ ಗಂಟೆಗಳ ಸಹಾಯ ವಾಣಿಯೊಂದನ್ನು ಸ್ಥಾಪಿಸಿದ್ದಾರೆ. ಉಕ್ರೇನ್‌ನಿಂದ ಭಾರತಕ್ಕೆ ಮರಳಲು ವಿಮಾನಗಳು ದೊರೆಯುತ್ತಿಲ್ಲ ಎಂಬ ಕರೆಗಳು ಬರುತ್ತಿವೆ. ಭಾರತೀಯರು ಆತಂಕ ಪಡದಂತೆ ಸಲಹೆ ನೀಡಲಾಗಿದೆ. ಶೀಘ್ರದಲ್ಲಿಯೇ ಸ್ವದೇಶಕ್ಕೆ ಮರಳಲು ವಿಮಾನಗಳ ವ್ಯವಸ್ಥೆ ಮಾಡಲಾಗುವುದು ಎಂದು ಕೈವ್‌ನಲ್ಲಿರುವ ಭಾರತೀಯ ರಾಯಭಾರಿ ಹೇಳಿದ್ದಾರೆ. ಪ್ರಸ್ತುತ ಉಕ್ರೇನ್‌ನಲ್ಲಿ ಉಕ್ರೇನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್, ಏರ್ ಅರೆಬೀಯಾ, ಪ್ಲೆöÊ ದುಬೈ ಮತ್ತು ಕತಾರ್ ಏರ್ ವೇಸ್ ವಿಮಾನಗಳ ಹಾರಾಟ ನಡೆಯುತ್ತಿದೆ. ಹೆಚ್ಚುವರಿ ಬೇಡಿಕೆ ಪೂರೈಸಲು ಹೆಚ್ಚಿನ ವಿಮಾನಗಳ ವ್ಯವಸ್ಥೆಗೆ ಚಿಂತಿಸಲಾಗಿದೆ ಎಂದು ರಾಯಭಾರಿ ತಿಳಿಸಿದ್ದಾರೆ.

ಅಜಿತ್ ದೋವಲ್ ಮನೆಗೆ ಅಪರಿಚಿತನ ಪ್ರವೇಶ

ನವದೆಹಲಿ, ಫೆ. ೧೬: ರಾಷ್ಟಿçÃಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಲು ಯತ್ನಿಸಿರುವ ಘಟನೆ ನಡೆದಿದೆ. ಭದ್ರತಾ ಪಡೆಗಳು ಆತನನ್ನು ತಡೆದು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿವೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಆತ ಮಾನಸಿಕವಾಗಿ ಅಸ್ವಸ್ಥ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಬಾಡಿಗೆ ಕಾರು ಓಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಭದ್ರತಾ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಾಗ ಆತ, ತನ್ನೊಳಗೆ ಯಾರೋ ಚಿಪ್ ಅಳವಡಿಸಿದ್ದಾರೆ ಮತ್ತು ತನ್ನನ್ನು ನಿಯಂತ್ರಿಸಲು ಪ್ರಯತ್ನಿ ಸುತ್ತಿದ್ದಾರೆ ಎಂದು ತನಿಖೆಯ ಸಮಯದಲ್ಲಿ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದ. ಆದರೆ ಪೊಲೀಸರು ಈ ಹೇಳಿಕೆಯನ್ನು ಸುಳ್ಳು ಎಂದು ಪತ್ತೆ ಮಾಡಿದ್ದಾರೆ.

ಬೆಂಗಾಳಿ ಗಾಯಕಿ ಸಂಧ್ಯಾ ಮುಖರ್ಜಿ ನಿಧನ

ಮುಂಬೈ, ಫೆ. ೧೬: ಖ್ಯಾತ ಬೆಂಗಾಳಿ ಗಾಯಕಿ ಸಂಧ್ಯಾ ಮುಖರ್ಜಿ (೯೦) ಅವರು ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕಳೆದ ಹಲವು ದಿನಗಳಿಂದ ಸಂಧ್ಯಾ ಅವರಿಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಏಕಾಏಕಿ ಹೃದಯಾಘಾತ ಸಂಭವಿಸಿದೆ. ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಕಾರಣಕ್ಕೆ ಅವರು ಸುದ್ದಿಯಾಗಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.