ವೀರಾಜಪೇಟೆ, ಫೆ. ೧೬: ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿಗೆ ಕಟ್ಟಡ ನಿರ್ಮಾಣಕ್ಕೆ ಜಾಗ ಅಗತ್ಯವಿದ್ದು ಜೂನಿಯರ್ ಕಾಲೇಜು ಬಳಿ ಹೆಚ್ಚುವರಿ ಜಾಗ ನೀಡಲು ಸಾಧ್ಯವಿಲ್ಲ. ಮಲಬಾರ್ ರಸ್ತೆಯಲ್ಲಿರುವ ಮುನ್ಸಿಪಲ್ ಶಾಲೆ ಜಾಗದಲ್ಲಿ ಕಾಲೇಜು ನಿರ್ಮಾಣಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸುವಂತೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರಿಗೆ ಸೂಚಿಸಿದರು.

ಪುರಭವನದಲ್ಲಿ ಅಧ್ಯಕ್ಷೆ ಸುಸ್ಮೀತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರ ಸಮ್ಮುಖದಲ್ಲಿ ಎಲ್ಲಾ ಸದಸ್ಯರ ಒಪ್ಪಿಗೆ ಪಡೆದು ನಿರ್ಣಯ ಕೈಗೊಳ್ಳಲಾಯಿತು.

ಕಾಲೇಜು ಕಟ್ಟಡ ನಿರ್ಮಾಣದ ಬಗ್ಗೆ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಶಾಸಕ ಬೋಪಯ್ಯ, ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಹಿಂದೆ ಮುನ್ಸಿಪಲ್ ಶಾಲೆ ನಿರ್ಮಾಣಕ್ಕೆ ಜಾಗ ನೀಡಿದ ದಾನಿಗಳು ಶಿಕ್ಷಣಕ್ಕೆ ಮಾತ್ರ ಎಂದಿರುವ ಕಾರಣ ಅಲ್ಲಿ ಬೇರೆ ಏನು ಮಾಡಲು ಸಾಧ್ಯವಿಲ್ಲ, ಆದರಿಂದ ಪ್ರಥಮ ದರ್ಜೆ ಕಾಲೇಜಿಗೆ ಜಾಗ ಹಸ್ತಾಂತರಿಸಿದರೆ, ಸುಮಾರು ರೂ. ೮ ಕೋಟಿ ಅನುದಾನದಲ್ಲಿ ಉತ್ತಮ ಕಟ್ಟಡ ನಿರ್ಮಿಸಬಹುದು ಎಂದು ಹೇಳಿದರು.

ನಗರೋತ್ಥನ ಅನುದಾನದಲ್ಲಿ ೫ ಕೋಟಿ ರೂ. ಬಂದಿದ್ದರೂ ಸೂಕ್ತ ಕ್ರಿಯಾ ಯೋಜನೆ ರೂಪಿಸದೆ ಅಧಿಕಾರಿಗಳು ಗೌಪ್ಯವಾÀಗಿ ಇಟ್ಟಿದ್ದಾರೆ ಎಂದು ಸದಸ್ಯ ಪೃಥ್ವಿನಾಥ್ ಸಭೆಗೆ ತಿಳಿಸಿದಾಗ ಅಭಿಯಂತರ ಹೇಮ್‌ಕುಮಾರ್ ಉತ್ತರಿಸಿ ಇದರ ನಿಯಮದಲ್ಲಿ ಗೊಂದಲಗಳಿದ್ದು ಅದರ ಸ್ವಷ್ಟನೆಗಾಗಿ ಕಾಯುತ್ತಿದ್ದೇವೆ ಇದನ್ನು ಶಾಸಕರು ಬಗೆಹರಿಸುವಂತೆ ವಿನಂತಿಸಿದರು.

ಸದಸ್ಯ ರಾಜೇಶ್ ಕೆಲವು ಸಂಘ-ಸAಸ್ಥೆಗಳು ಪ.ಪಂ.ನಿAದ ಕಟ್ಟಡವನ್ನು ಪಡೆದು ಅನ್ಯರಿಗೆ ಬಾಡಿಗೆ ನೀಡಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕೆಲವು ಜಾಗ ನಿರುಪಯುಕ್ತವಾಗಿದೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಈ ಬಗ್ಗೆ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಭೆಗೆ ತಿಳಿಸಿದರು.

ಈ ವಿಚಾರದಲ್ಲಿ ಮುಖ್ಯಾಧಿಕಾರಿಗಳ ಬಗ್ಗೆ ಸೂಕ್ತ ಮಾಹಿತಿ ಇರಲಿಲ್ಲ. ಇದನ್ನು ಗಮನಿಸಿದ ಶಾಸಕರು ಸೂಕ್ತ ಮಾಹಿತಿ ಯೊಂದಿಗೆ ಸಭೆಗೆ ಹಾಜರಾಗುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಮಹಮದ್ ರಾಫಿ ಮಾತನಾಡಿ, ನೂತನ ಮೀನು ಮಾರುಕಟ್ಟೆಯ ಕಾಮಗಾರಿ ಪೂರ್ಣವಾಗಿಲ್ಲ. ಈಗ ಲಭ್ಯವಿರುವ ಮೀನು ಮಾರುಕಟ್ಟೆ ಸ್ಥಳ ಕಿರಿದಾಗಿದೆ. ಇದರ ಬಗ್ಗೆ ವಿವರ ನೀಡುವಂತೆ ಕೇಳಿದಾಗ ಸಭೆಯಲ್ಲಿದ್ದ ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್ ಈ ಕಾಮಗಾರಿ ೧.೯೮ ಕೋಟಿ ರೂ.ಗಳದಾಗಿದೆ ಪ್ರಸ್ತತ ೧.೬೪ ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಇದರಿಂದ ಕಾಮಗಾರಿ ಆಗಿಲ್ಲ ಎಂದರು. ಕಟ್ಟಡದ ಸ್ಥಿತಿಗತಿಯ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ನಿರ್ಮಿತಿ ಕೇಂದ್ರದ ಬದಲು ಪ.ಪಂ. ನಿರ್ವಹಣೆ ಮಾಡುತ್ತೇವೆ ಎಂದು ಸಂಬAಧÀಪಟ್ಟ ಇಲಾಖೆೆಗೆ ಪತ್ರ ಬರೆಯಿರಿ ಎಂದು ಶಾಸಕ ಬೋಪಯ್ಯ ಮುಖ್ಯಾಧಿಕಾರಿ ಚಂದ್ರಕುಮಾರ್‌ಗೆ ಸೂಚಿಸಿದರು. ನಂತರ ಸದಸ್ಯ ಪ್ರಥ್ವಿನಾಥ್ ಮಾತನಾಡಿ, ಕಚೇರಿಯ ಪೀಠೋಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಇದರ ಬಗ್ಗೆ ಹಿಂದಿನ ಸಭೆಯಲ್ಲಿ ಲೋಕಾಯುಕ್ತ ತನಿಖೆಗೆ ಒತ್ತಾಯಿಸಿದಾಗ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಆದರೂ ಈವರಗೆ ಕ್ರಮ ವಹಿಸಿಲ್ಲ ಎಂದು ಸಭೆಗೆ ತಿಳಿಸಿದರು.

ಪೃಥ್ವಿನಾಥ್ ಅವರ ಆರೋಪಕ್ಕೆ ಸದಸ್ಯ ಮತೀನ್ ಆಕ್ಷೇಪಿಸಿ ನಮ್ಮ ಸಮ್ಮತ್ತಿ ಇಲ್ಲ, ಇದು ಪಾರದರ್ಶಕವಾಗಿ ಆಗಿದೆ. ತನಿಖೆಯಾಗಲೇಬೇಕು ಎಂದಾದರೆ ನಿಮ್ಮ ಮನೆ ಸಮೀಪ ಆಗಿರುವ ತಡೆಗೋಡೆ ಕುರಿತು ತನಿಖೆಯಾಗಬೇಕು ಎಂದಾಗ ಯಾವ ತನಿಖೆಗೆ ನಾನು ಸಿದ್ದ ಎಂದು ಸವಾಲೆಸೆದರು.

ಪೃಥ್ವಿನಾಥ್ ಆರೋಪಕ್ಕೆ ಸದಸ್ಯರಾದ ಸಚಿನ್ ಕುಟ್ಟಯ್ಯ, ಅನಿತಾ ಸೇರಿದಂತೆ ಇನ್ನೂ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಈ ಕುರಿತು ಮಾತನಾಡಿ, ನೀವು ಜನಪ್ರತಿನಿಧಿಗಳು ನಿಮ್ಮ ಜವಾಬ್ದಾರಿ ಅರಿತು ನಡೆಯಿರಿ. ಸಭೆ ನಡೆಸಲು ಅಗತ್ಯ ಸಹಕಾರ ನೀಡಿ ಒಳ್ಳೆಯ ಗುಣನಡವಳಿಕೆಯನ್ನು ಪ್ರದರ್ಶಿಸಿ ಎಂದು ಹೇಳಿದರು.

ವೇದಿಕೆಯಲ್ಲಿ ಮುಖ್ಯಾಧಿಕಾರಿ ಚಂದ್ರಕುಮಾರ್, ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಅಭಿಯಂತರ ಹೇಮ್‌ಕುಮಾರ್ ಉಪಸ್ಥಿತರಿದ್ದರು.