*ಗೋಣಿಕೊಪ್ಪ, ಫೆ. ೧೬: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ಆಡಳಿತ ಮಂಡಳಿ ಸಭೆ ಸಿಲ್ವರ್ ಸ್ಕೆöÊ ಸಭಾಂಗಣದಲ್ಲಿ ನಡೆಯಿತು.
ಸಂಘ ಚಟುವಟಿಕೆ, ಕಾರ್ಯಕ್ರಮ ಆಯೋಜನೆ, ಆರ್ಥಿಕ ಕ್ರೋಢೀಕರಣ ಬಗ್ಗೆ ಚರ್ಚಿಸಲಾಯಿತು.
ಉಪಾಧ್ಯಕ್ಷ ಸ್ಥಾನಕ್ಕೆ ಮಚ್ಚಮಾಡ ಅನೀಶ್ ಮಾದಪ್ಪ, ಕಾರ್ಯದರ್ಶಿಯಾಗಿ ಮಂಡೇಡ ಅಶೋಕ್, ನಾಮ ನಿರ್ದೇಶಕರಾಗಿ ಹೆಚ್.ಆರ್. ಸತೀಶ್, ಎಂ.ಎA. ಚನ್ನನಾಯಕ್, ಚಿಮ್ಮಣಮಾಡ ದರ್ಶನ್ ದೇವಯ್ಯ, ಜಗದೀಶ್ ಜೋಡುಬೀಟಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಖಜಾಂಚಿ ವಿ.ವಿ. ಅರುಣ್ಕುಮಾರ್ ಇದ್ದರು.