ಕುಶಾಲನಗರ, ಫೆ. ೧೬: ಕುಶಾಲನಗರ ಸಮೀಪ ಹಾರಂಗಿ ರಸ್ತೆ ಬಳಿ ಇರುವ ಕೆಎಸ್ ಬಿಸಿಎಲ್ ಉಗ್ರಾಣದಲ್ಲಿ ಅಂದಾಜು ೧ ಲಕ್ಷದ ೬೬ ಸಾವಿರ ರೂಪಾಯಿ ಮೌಲ್ಯದ ಅವಧಿ ಮೀರಿದ ಮದ್ಯವನ್ನು ನಾಶಪಡಿಸಲಾಯಿತು.

ಸೋಮವಾರಪೇಟೆ ವಲಯ ಅಬಕಾರಿ ಉಪ ಅಧೀಕ್ಷಕ ಆರ್.ಎಂ. ಚೈತ್ರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಗ್ರಾಣ ವ್ಯವಸ್ಥಾಪಕ ಎಸ್. ರಾಜು, ಅಧಿಕಾರಿಗಳಾದ ಲೋಕೇಶ್ ಸಿಬ್ಬಂದಿಗಳು ಇದ್ದರು.