ಮಡಿಕೇರಿ, ಫೆ. ೧೪: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಅವರ ನೇತೃತ್ವದಲ್ಲಿ ನಡೆದ ಯುವನೀತಿ ಸಭೆಯಲ್ಲಿ ಕೊಡಗು ಜಿಲ್ಲೆಯ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಅವರು ಯುವನೀತಿ ಹಾಗೂ ಇಲಾಖೆಯ ವಿವಿಧ ಯೋಜನೆಯ ಅನುಷ್ಠಾನದ ಕುರಿತು ವಿಷಯ ಮಂಡಿಸಿದರು.

ಬೆAಗಳೂರಿನ ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಯುವ ಭವನಕ್ಕೆ ಸಂಬAಧಿಸಿದAತೆ ಸಚಿವರ ಗಮನ ಸೆಳೆದ ಸುಕುಮಾರ್, ಗ್ರಾಮೀಣ ಮಟ್ಟದಲ್ಲಿ ಇರುವ ಯುವ ಸಂಘಗಳಿಗೆ ನಿವೇಶನವಿದ್ದರೂ ದಾಖಲೆಗಳಿಲ್ಲ ಅದನ್ನು ಒದಗಿಸಿಕೊಡಬೇಕು, ಜಿಲ್ಲಾ ಮಟ್ಟದಲ್ಲಿ ಯುವ ಸಮ್ಮೇಳನ ಕಾರ್ಯಾಗಾರ, ಪ್ರಶಸ್ತಿ ಪ್ರದಾನ ಸಮಾರಂಭ, ತಾಲೂಕು, ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ನೀಡಲಾಗುವ ಅನುದಾನವನ್ನು ಹೆಚ್ಚಿಸಬೇಕು, ಗ್ರಾ.ಪಂ.ಯಲ್ಲಿ ಶೇ. ೧೫ ರಷ್ಟು ಅನುದಾನವನ್ನು ಸ್ಥಳೀಯ ಯುವ ಸಂಘಗಳಿಗೆ ಮೀಸಲಿಡಬೇಕು ಹಾಗೂ ಅದನ್ನು ಕಡ್ಡಾಯವಾಗಿ ಖರ್ಚುಮಾಡಲು ಆದೇಶ ಹೊರಡಿಸಬೇಕು, ಜಿಲ್ಲಾ ಮಟ್ಟದ ವೈಯಕ್ತಿಕ ಪ್ರಶಸ್ತಿಯನ್ನು ಆರಂಭಿಸಿ ಮೊತ್ತವನ್ನು ರೂ. ೨೫ ಸಾವಿರಕ್ಕೆ ಹೆಚ್ಚಿಸಬೇಕು, ನಿವೇಶನ ರಹಿತ ಪ್ರಶಸ್ತಿ ವಿಜೇತರಿಗೆ ನಿವೇಶನ ಕಲ್ಪಿಸಬೇಕು, ಸಂಘಕ್ಕೆ ನೀಡುವ ಪ್ರಶಸ್ತಿಯನ್ನು ಮತ್ತೆ ಆರಂಭಿಸಿ ರೂ. ೧ ಲಕ್ಷ ನಗದು ನೀಡಬೇಕು, ಸಂಘದ ಸದಸ್ಯರ ಬೌದ್ಧಿಕ ಮಟ್ಟ ಹೆಚ್ಚಿಸಲು ತರಬೇತಿ ಶಿಬಿರ, ಅಂತರ ರಾಜ್ಯ ಹಾಗೂ ರಾಷ್ಟಿçÃಯ ಭಾವೈಕ್ಯತಾ ಶಿಬಿರ ನಡೆಸಲು ಅನುದಾನ ಮೀಸಲಿಡಬೇಕು, ಜಿಲ್ಲಾ, ತಾಲೂಕು, ವಲಯ ಮಟ್ಟದಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ನಡೆಸಲು ಅನುದಾನ ಮೀಸಲಿಡಬೇಕು ಎಂದು ಸುಕುಮಾರ್ ಮನವಿ ಮಾಡಿದರು.

ತಾಲೂಕು ಯುವಜನ ಮೇಳ, ವಿಭಾಗ ಯುವಜನ ಮೇಳ, ಯುವ ಸಂಪರ್ಕ ಸಭೆ, ಚಾರಣಗಳನ್ನು ರದ್ದುಗೊಳಿಸಲಾಗಿದ್ದು, ಇದನ್ನು ಮುಂದುವರೆ ಸಲು ಅನುದಾನ ಮೀಸಲಿಡಬೇಕು. ಕ್ರೀಡಾ ತವರೂರು ಕೊಡಗಿನಲ್ಲಿ ಪ್ರತ್ಯೇಕ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು, ಪ್ರತಿ ಜಿಲ್ಲೆಯಲ್ಲಿ ಯುವಭವನಕ್ಕೆ ಅನುದಾನ ನೀಡಬೇಕು, ಕೊಡಗಿಗೆ ಕ್ರೀಡಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು, ಪೈಸಾರಿ ನಿವೇಶನ ಇರುವ ಸಂಘಗಳಿಗೆ ಕಟ್ಟಡಕ್ಕೆ ಅನುದಾನ ನೀಡಬೇಕು ಅಥವಾ ನಿವೇಶನ ಇರುವ ಸಂಘಕ್ಕೆ ಕಟ್ಟಡಕ್ಕೆ ಅನುದಾನ ನೀಡಬೇಕೆಂದು ಕೋರಿದರು.

ಕೊಡಗಿನ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ರಾಜ್ಯ ಮಟ್ಟದ ಹಲವು ಕಾರ್ಯಕ್ರಮಗಳನ್ನು ಜಿಲ್ಲಾ ಒಕ್ಕೂಟ ವತಿಯಿಂದಲೇ ನಡೆಸಿಕೊಂಡು ಬರುತ್ತಿದ್ದೇವೆ. ಪ್ರತಿ ವರ್ಷ ಮಡಿಕೇರಿ ತಾಲೂಕಿನ ಕಗ್ಗೋಡ್ಲುವಿನಲ್ಲಿ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇದಕ್ಕೂ ಸಹಕಾರ ಕೋರಿದರು.

ಯುವಭವನ ಮರಳಿಸಿ

ಸುಮಾರು ೯ ವರ್ಷಗಳ ಹಿಂದೆ ನಿರ್ಮಾಣಗೊಂಡ ಯುವಭವನವನ್ನು ಯುವ ಒಕ್ಕೂಟಕ್ಕೆ ಬಿಟ್ಟುಕೊಡದೆ ಮಹಿಳಾ ಕಾಲೇಜು ನಡೆಸಲಾಗುತ್ತಿದೆ. ತಕ್ಷಣ ಭವನವನ್ನು ಒಕ್ಕೂಟಕ್ಕೆ ನೀಡಬೇಕು ಎಂದು ಸುಕುಮಾರ್ ಸಚಿವರಲ್ಲಿ ಮನವಿ ಮಾಡಿದರು.

ಯಶಸ್ವೀ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಕೊಡಗು ಜಿಲ್ಲಾ ಯುವ ಒಕ್ಕೂಟಕ್ಕೆ ಮಡಿಕೇರಿ ನಗರ ವ್ಯಾಪ್ತಿಯ ಕರ್ಣಂಗೇರಿ ಗ್ರಾಮದ ಸರ್ವೆ ನಂ ೫೧೨/೧ ರಲ್ಲಿ ೦.೧೦ ಎಕರೆ ನಿವೇಶನವು ೨೦೦೪ ರಲ್ಲಿ ಜಿಲ್ಲಾ ಯುವಭವನ ಕಟ್ಟಡ ನಿರ್ಮಾಣಕ್ಕಾಗಿ ಆಗಿನ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದರು. ಈ ನಿವೇಶನದಲ್ಲಿ ಯುವಭವನ ಕಟ್ಟಡ ನಿರ್ಮಾಣಕ್ಕೆ ಅಂದಿನ ಸಂಸದ ಸದಾನಂದ ಗೌಡರು ರೂ. ೧ ಲಕ್ಷ ಅನುದಾನ ನೀಡಿ ಭೂಮಿಪೂಜೆ ನೆರವೇರಿಸಿದ್ದರು. ಕೊಡಗು ಜಿಲ್ಲೆಯ ವಿವಿಧ ಯುವ ಸಂಘ, ಯುವತಿ ಮಂಡಳಿ, ಮಹಿಳಾ ಸಮಾಜ, ಜಿಲ್ಲಾ ಒಕ್ಕೂಟದ ಸದಸ್ಯರುಗಳು ವೈಯಕ್ತಿಕವಾಗಿ ಸಾಮಗ್ರಿ ನೀಡುವ ಹಾಗೂ ಧನ ಸಹಾಯ ಮಾಡುವ ಮೂಲಕ ರೂ. ೫ ಲಕ್ಷದ ೨೦ ಸಾವಿರ ಮೊತ್ತದಲ್ಲಿ ಭವನದ ತಳಪಾಯವನ್ನು ನಿರ್ಮಿಸಲಾಯಿತು.

೨೦೦೮ರಲ್ಲಿ ಯುವ ಭವನದ ನಕಾಶೆಯನ್ನು ಮತ್ತು ಅಂದಾಜು ಪಟ್ಟಿಯನ್ನು ಅಂದಿನ ಸಭಾಧ್ಯಕ್ಷರಾಗಿದ್ದ ಹಾಲಿ ಶಾಸಕ ಕೆ.ಜಿ. ಬೋಪಯ್ಯ ಅವರ ನೇತೃತ್ವದಲ್ಲಿ ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ ಅವರನ್ನು ಭೇಟಿ ಮಾಡಿ ಯುವಭವನ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲು ಕೋರಲಾಗಿತ್ತು. ಅದರಂತೆ ೨೦೦೯ರಲ್ಲಿ ಕಟ್ಟಡ ನಿರ್ಮಾಣಕ್ಕೆ ರೂ. ೩೧ ಲಕ್ಷ ಬಿಡುಗಡೆ ಮಾಡಿದ್ದರು ಅಲ್ಲದೆ ಭೂ ಸೇನಾ ನಿಗಮಕ್ಕೆ ಕಾಮಗಾರಿಯ ಗುತ್ತಿಗೆಯನ್ನು ನೀಡಲಾಯಿತು. ಭೂ ಸೇನಾ ನಿಗಮ ನೀಲಿ ನಕಾಶೆಗೆ ಅನುಗುಣವಾಗಿ ಕೆಲಸವನ್ನು ನಿರ್ವಹಿಸಿದೆ. ೨೦೧೩ರಲ್ಲಿ ಮಾರ್ಚ್ನಲ್ಲಿ ಯುವಭವನ ಕಟ್ಟಡವನ್ನು ಹಸ್ತಾಂತರಿಸಲು ತಯಾರಿ ನಡೆಸಿದ್ದರು. ಆ ಸಂದರ್ಭ ಯುವ ಒಕ್ಕೂಟದ ಸದಸ್ಯರುಗಳು ನಮ್ಮ ನೀಲಿ ನಕಾಶೆಗೆ ಸರಿಯಾಗಿ ಕೆಲಸ ನಿರ್ವಹಿಸಿರುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

೨೦೧೩ರಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರು ಯುವಭವನವನ್ನು ತಿಂಗಳ ಮಟ್ಟಿಗೆ ಮಹಿಳಾ ಕಾಲೇಜಿಗೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಅಲ್ಲದೆ ಉಳಿದ ಕೆಲಸ ಕಾರ್ಯಗಳನ್ನು ಶಾಸಕರ ನಿಧಿಯಿಂದ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆ ಯುವ ಒಕ್ಕೂಟದವರು ಮಹಿಳಾ ಕಾಲೇಜು ನಡೆಸಲು ಯುವ ಭವನವನ್ನು ೬ ತಿಂಗಳ ಮಟ್ಟಿಗೆ ಬಿಟ್ಟುಕೊಡಲು ಮೌಖಿಕ ಒಪ್ಪಿಗೆಯನ್ನು ನೀಡಿದ್ದರು. ಆದರೆ ೯ ವರ್ಷ ಕಳೆದರೂ ಯುವ ಜನತೆಯ ಕಾರ್ಯ ಚಟುವಟಿಕೆಗೆ ಯುವಭವನವನ್ನು ಬಿಟ್ಟುಕೊಡಲು ಸತಾಯಿಸಲಾಗುತ್ತಿದೆ. ಒಕ್ಕೂಟದ ವತಿಯಿಂದ ವಿವಿಧ ತರಬೇತಿ ಶಿಬಿರ, ಕಾರ್ಯಾಗಾರಗಳು ಯುವ ಸಮ್ಮೇಳನ, ಯುವ ಜನೋತ್ಸವ, ಸಾಂಸ್ಕöÈತಿಕ ಕಾರ್ಯಕ್ರಮ, ಯುವಜನಮೇಳ, ಯುವ ಒಕ್ಕೂಟದ ಸಭೆ ಮತ್ತಿತರ ಚಟುವಟಿಕೆಗಳನ್ನು ನಡೆಸಲು ಕಷ್ಟ ಸಾಧ್ಯವಾಗುತ್ತಿದೆ.

ಪ್ರಸ್ತುತ ಯುವ ಒಕ್ಕೂಟ ಖಾಸಗಿ ಮಳಿಗೆಯಲ್ಲಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಬಾಡಿಗೆ ಕಟ್ಟಲಾಗದ ಪರಿಸ್ಥಿತಿಯಲ್ಲಿದೆ. ಅದುದ್ದರಿಂದ ತಾವುಗಳು ಮಹಿಳಾ ಕಾಲೇಜನ್ನು ಅದಷ್ಟು ಬೇಗ ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಕೊಡಗು ಜಿಲ್ಲೆಯ ಯುವಕರ ಕನಸಾದ ಯುವ ಭವನವನ್ನು ಬಿಟ್ಟುಕೊಡುವಂತೆ ಸುಕುಮಾರ್ ಮನವಿ ಮಾಡಿದರು.

ಸಭೆಯಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ, ಕರ್ನಾಟಕ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಡಾ. ಕೆ. ಗೋವಿಂದ ರಾಜು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ರಾಜ್ಯ ಯುವ ಸಂಘಗಳ ಪ್ರತಿನಿಧಿಗಳು, ಯುವ ಪ್ರಶಸ್ತಿ ವಿಜೇತರು ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ಪ್ರಮುಖರು ಉಪಸ್ಥಿತರಿದ್ದರು.