ಮಡಿಕೇರಿ, ಫೆ. ೧೪: ಸಿದ್ದಾಪುರ ಸಮೀಪದ ಮಾಲ್ದಾರೆ ವ್ಯಾಪ್ತಿಯ ವನ್ಯಜೀವಿ ಅರಣ್ಯ ವಿಭಾಗದಲ್ಲಿ ಹುಲಿ ಚರ್ಮ ಪತ್ತೆಯಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು 'ಶಕ್ತಿ'ಗೆ ತಿಳಿಸಿವೆ.
ಹುಲಿಯನ್ನು ಕೊಂದು ಚರ್ಮವನ್ನು ಮಾರಾಟ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಅಂದಾಜಿಸಲಾಗಿದ್ದು, ತನಿಖೆ ಮುಂದುವರಿದಿದೆ.
ತಾ. ೧೫ ರಂದು (ಇಂದು) ನೈಜಾಂಶ ಹೊರಬೀಳಲಿದೆ.