ಗೋಣಿಕೊಪ್ಪ ವರದಿ, ಫೆ. ೧೪: ಅಮ್ಮತ್ತಿ ನಾಡು ಹಿತರಕ್ಷಣಾ ವೇದಿಕೆ ವತಿಯಿಂದ ರಸ್ತೆ ದುರಸ್ತಿಗೆ ಆಗ್ರಹಿಸಿ ಅಮ್ಮತ್ತಿಯಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅಧಿಕಾರಿಯಿಂದ ಲಿಖಿತ ಪತ್ರ ಪಡೆದು ಪ್ರತಿಭಟನೆ ಹಿಂಪಡೆಯಲಾಯಿತು.

ಮಧ್ಯಾಹ್ನ ೧೨ ಗಂಟೆಯಿAದ ೧ ಗಂಟೆವರೆಗೆ ಪ್ರತಿಭಟನೆ ನಡೆಯಿತು. ಮುಖ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗ್ರಾಮಸ್ಥರು ರಸ್ತೆ ತಡೆ ಮಾಡಿದರು. ಅಮ್ಮತ್ತಿಗೆ ಸಂಪರ್ಕ ಕಲ್ಪಿಸುವ ನಾಲ್ಕು ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ೭ ದಿನಗಳ ಒಳಗೆ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ವೀರಾಜಪೇಟೆ ಎಇಇ ಸಿದ್ದೇಗೌಡ ಲಿಖಿತ ಪತ್ರದ ಮೂಲಕ ಭರವಸೆ ನೀಡಿದರು. ಇದರಂತೆ ಪ್ರತಿಭಟನೆ, ರಸ್ತೆ ತಡೆಯನ್ನು ಕೈಬಿಡಲಾಯಿತು. ಅಂಗಡಿ-ಮಳಿಗೆ ಮುಚ್ಚಿ ಗ್ರಾಹಕರು

(ಮೊದಲ ಪುಟದಿಂದ) ಬೆಂಬಲ ಸೂಚಿಸಿದರು. ರಸ್ತೆ ತಡೆ ಕೈಬಿಡುವಂತೆ ಪೊಲೀಸರು ಒತ್ತಡ ಹಾಕುವ ಪ್ರಯತ್ನ ನಡೆಸಿದರು. ಇದಕ್ಕೂ ಜಗ್ಗದ ಸಾರ್ವಜನಿಕರು ಅಧಿಕಾರಿ ಸ್ಥಳಕ್ಕೆ ಬಂದು ಲಿಖಿತ ಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಸುಮಾರು ೧ ಗಂಟೆ ಕಾಲ ಪ್ರತಿಭಟನೆ ನಡೆಯಿತು. ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಅಮ್ಮತ್ತಿ-ಸಿದ್ದಾಪುರ, ಅಮ್ಮತ್ತಿ-ಪಾಲಿಬೆಟ್ಟ, ಅಮ್ಮತ್ತಿ- ಹೊಸೂರು- ಗೋಣಿಕೊಪ್ಪ ರಸ್ತೆಗಳ ಅಭಿವೃದ್ಧಿ ಕೆಲಸ ಅರ್ಧದಲ್ಲಿ ಮೊಟಕುಗೊಂಡಿದೆ. ಒಂಟಿಯAಗಡಿ ಸೇತುವೆ ರಸ್ತೆ ದುರಸ್ತಿಯಾಗದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ನೋವು ಹಂಚಿಕೊAಡರು. ಶೀಘ್ರ ಕಾಮಗಾರಿ ಅನುಷ್ಠಾನಕ್ಕೆ ಪಟ್ಟು ಹಿಡಿದರು. ೭ ದಿನಗಳಲ್ಲಿ ಕಾಮಗಾರಿ ಆರಂಭಿಸದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟ ಮತ್ತು ನಿರಂತರ ರಸ್ತೆ ತಡೆ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಲೋಕೋಪಯೋಗಿ ಇಲಾಖೆಯ ವೀರಾಜಪೇಟೆ ವೃತ್ತ ಎಇಇ ಸಿದ್ದೇಗೌಡ ಆಗಮಿಸಿ ಪತ್ರದ ಮೂಲಕ ಜನರನ್ನು ಸಮಾಧಾನ ಪಡಿಸಿದರು. ಅಮ್ಮತ್ತಿ ನಾಡು ಹಿತರಕ್ಷಣಾ ವೇದಿಕೆಗೆ ಲಿಖಿತ ಪತ್ರ ನೀಡಿದರು.

ವೀರಾಜಪೇಟೆ-ಸಿದ್ದಾಪುರ ರಸ್ತೆ ಕಾಮಗಾರಿಯನ್ನು ಮಾರ್ಚ್ ೧೦ ರಿಂದ ಆರಂಭಿಸಲಾಗುತ್ತದೆ. ಶಾಸಕ ಕೆ.ಜಿ. ಬೋಪಯ್ಯ ಅವರು ಕಾವಾಡಿ ಗ್ರಾಮದಿಂದ ಅಮ್ಮತ್ತಿ-ಸಿದ್ದಾಪುರ ರಸ್ತೆಯ ೫ ಕಿ. ಮೀ. ಅಭಿವೃದ್ಧಿಗೆ ಸರ್ಕಾರಕ್ಕೆ ಬರೆದಿರುವ ಪತ್ರ ಅನುಮೋದನೆ ಹಂತದಲ್ಲಿರುತ್ತದೆ. ಅನುಮೋದನೆ ಪಡೆದು ಮಾ. ೧೦ ರಿಂದ ಕಾಮಗಾರಿ ಆರಂಭಿಸಲಾಗುವುದು.

ಅಮ್ಮತ್ತಿ-ಪಾಲಿಬೆಟ್ಟ ರಸ್ತೆ ಮತ್ತು ಅಮ್ಮತ್ತಿ-ಒಂಟಿಯAಗಡಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಟೆಂಡರ್ ಪಡೆದುಕೊಂಡಿದ್ದು, ತೃಪ್ತಿಕರವಾಗಿ ಕಾಮಗಾರಿ ನಡೆಸುತ್ತಿಲ್ಲ. ಇದೀಗ ಗುತ್ತಿಗೆದಾರರೇ ಇಲಾಖೆಗೆ ಪತ್ರ ಬರೆದು ಕಾಮಗಾರಿ ಆರಂಭಿಸಲು ೭ ದಿನ ಕಾಲಾವಕಾಶ ಕೇಳಿರುವುದರಿಂದ ಅವರಿಗೆ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಕಾಮಗಾರಿ ಗುಣಮಟ್ಟದಲ್ಲಿ ನಿರ್ವಹಿಸದಿದ್ದರೆ ನೀಡಿರುವ ಟೆಂಡರ್ ರದ್ದು ಮಾಡಿ, ಮೇಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿ ೩ ತಿಂಗಳ ಒಳಗೆ ಬೇರೆ ಗುತ್ತಿಗೆದಾರರಿಗೆ ಟೆಂಡರ್ ನೀಡಿ, ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದರೊಂದಿಗೆ ಒಂಟಿಯAಗಡಿ ಸೇತುವೆ ಸಂಪರ್ಕ ರಸ್ತೆ ಕೆಲಸ ಅಪೂರ್ಣವಾಗಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಅರಿತು, ೭ ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಗುತ್ತಿಗೆದಾರ ನಿರ್ವಹಿಸದಿದ್ದಲ್ಲಿ ೧ ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.

ಅಮ್ಮತ್ತಿ- ಹೊಸೂರು- ಗೋಣಿಕೊಪ್ಪ ರಸ್ತೆಯ ದುರಸ್ತಿಗೆ ಉಳಿದಿರುವ ೪೫೦ ಮೀಟರ್ ರಸ್ತೆಯ ೨೦೦ ಮೀಟರ್ ರಸ್ತೆ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಅಭಿವೃದ್ಧಿಪಡಿಸಲಾಗುವುದು. ಈ ಎಲ್ಲ ರಸ್ತೆಯ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿ ಲಿಖಿತ ರೂಪದ ಭರವಸೆ ನೀಡಿದರು.

ಈ ಸಂದರ್ಭ ಅಮ್ಮತ್ತಿ ನಾಡು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಪ್ರಮುಖರಾದ ಕುಟ್ಟಂಡ ಪ್ರಿನ್ಸ್ ಗಣಪತಿ, ಕಾವಾಡಿಚಂಡ ಗಣಪತಿ, ಮಾಚಿಮಂಡ ಮಧು ಮಾದಪ್ಪ, ಬಿದ್ದಂಡ ಕರುಂಬಯ್ಯ, ಕೋಡಿಮಣಿಯಂಡ ವಿಶ್ವನಾಥ ಇದ್ದರು.