ಪೊನ್ನAಪೇಟೆ, ಫೆ.೧೪: ಪೊನ್ನಂಪೇಟೆ ಮಾಸ್ ಬಾಯ್ಸ್ ವತಿಯಿಂದ ಇಲ್ಲಿನ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ, ಪೊನ್ನಂಪೇಟೆ ಪ್ರೀಮಿಯರ್ ಲೀಗ್-೨ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಆಗಿ ಮುನೀರ್ ಮಾಲೀಕತ್ವದ ಸ್ಟಾರ್ ಇಲೆವೆನ್ ತಂಡ ಹೊರ ಹೊಮ್ಮಿತು. ಸಫಿರ್ ಮಾಲೀಕತ್ವದ ವೈ.ಸಿ.ಪಿ. ತಂಡ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು.

೬ ಓವರ್‌ಗಳಿಗೆ ಸೀಮಿತವಾಗಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸ್ಟಾರ್ ಇಲೆವೆನ್ ತಂಡ ಕ್ಷೇತ್ರ ರಕ್ಷಣೆಯನ್ನು ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದುಕೊಂಡ ವೈ.ಸಿ.ಪಿ. ತಂಡ ನಿಗದಿತ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿತು. ಗೆಲ್ಲಲು ೪೫ ರನ್‌ಗಳ ಗುರಿ ಪಡೆದ ಸ್ಟಾರ್ ಇಲವೆನ್ ೫.೩ ಓವರ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಭರ್ಜರಿ ಜಯಗಳಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಮೊದಲನೇ ಕ್ವಾಲಿಫಯರ್ ಪಂದ್ಯದಲ್ಲಿ ಸ್ಟಾರ್ ಇಲೆವೆನ್ ತಂಡ ವೈಸಿಪಿ ತಂಡವನ್ನು ಸೋಲಿಸಿ ನೇರವಾಗಿ ಫೈನಲ್ ಪ್ರವೇಶ ಪಡೆದು ಕೊಂಡಿತು.

ಬೋಜಿ ಕ್ರಿಕೆಟರ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್.ಸಿ.ಬಿ. ಜಯಭೇರಿ ಬಾರಿಸಿತು. ವೈ.ಸಿ.ಪಿ. ಮತ್ತು ಆರ್ ಸಿ ಬಿ ನಡುವಿನ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ವೈ.ಸಿ.ಪಿ. ಜಯ ಸಾಧಿಸಿ ಫೈನಲ್ ಪ್ರವೇಶ ಪಡೆದುಕೊಂಡಿತು.

ವೈಯಕ್ತಿಕ ಪ್ರಶಸ್ತಿ

ಸರಣಿ ಶ್ರೇಷ್ಠನಾಗಿ ಸ್ಟಾರ್ ಇಲೆವೆನ್ ತಂಡದ ರೈನಾ, ಪಂದ್ಯ ಶ್ರೇಷ್ಠನಾಗಿ ಸ್ಟಾರ್ ಇಲೆವೆನ್ ತಂಡದ ಪಳನಿ,

ಬೆಸ್ಟ್ ಬ್ಯಾಟ್ಸ್ ಮನ್ ಆಗಿ ಆರ್ ಸಿಬಿ ತಂಡದ ಅನಿಸ್, ಬೆಸ್ಟ್ ಬೌಲರ್ ಆಗಿ ವೈ.ಸಿ.ಪಿ. ತಂಡದ ಜುನೈದ್, ಬೆಸ್ಟ್ ವಿಕೆಟ್ ಕೀಪರ್ ಆಗಿ ಎ ಜೆ ಕ್ರಿಕೆಟರ್ಸ್ನ ಅಜಿತ್, ಬೆಸ್ಟ್ ಕ್ಯಾಚರ್ ಆಗಿ ವೈ.ಸಿ.ಪಿ. ತಂಡದ ರೌಫ್, ಬೆಸ್ಟ್ ಫೀಲ್ಡರ್ ಆಗಿ ಸ್ಟಾರ್ ಇಲೆವೆನ್‌ನ ಶೋಯಲ್ ಪ್ರಶಸ್ತಿ ಪಡೆದು ಕೊಂಡರು. ಉತ್ತಮ ತಂಡ ಪ್ರಶಸ್ತಿಯನ್ನು ಉಷಾ ಕ್ರಿಕೆಟರ್ಸ್ ತಂಡ ಪಡೆದುಕೊಂಡಿತು.

ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಹೈಕೋರ್ಟ್ ವಕೀಲರು ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಪಿ ಡಬ್ಲ್ಯೂ ಡಿ ಇಂಜಿನಿಯರ್ ಸಣ್ಣುವಂಡ ನವೀನ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಕಾಂಗ್ರೆಸ್ ಮುಖಂಡರಾದ ರಶೀದ್, ಕೊಡಗು ರೈಡರ್ಸ್ ಕ್ಲಬ್ ಅಧ್ಯಕ್ಷ ಪ್ರಥ್ವಿ ಸುಬ್ಬಯ್ಯ,ಉದ್ಯಮಿ ನಾಗೇಂದ್ರ ರೈ, ಮಚ್ಚಮಾಡ ಮಧು, ಗ್ರಾ.ಪಂ.ಸದಸ್ಯ ರಶೀದ್, ಪಂದ್ಯಾವಳಿ ಆಯೋಜಕರಾದ ಮಾಸ್ ಕ್ರಿಕೆಟರ್ಸ್ ಅಧ್ಯಕ್ಷ ಕಾಕಾಮಾಡ ಅಜಿತ್, ಕಾರ್ಯದರ್ಶಿ ಅಶ್ವನ್, ಖಜಾಂಚಿ ಮಧು ಸದಸ್ಯರಾದ ಮಯೂರ್, ಅರ್ಮುಗ, ಸೆಂದಿಲ್, ಮದನ್ ಹಾಜರಿದ್ದರು.

- ಚನ್ನನಾಯಕ