ಮಡಿಕೇರಿ, ಫೆ.೧೫: ಅರಣ್ಯದೊಳಗೆ ಹುಲಿಯನ್ನು ಬೇಟೆಯಾಡಿ, ಚರ್ಮವನ್ನು ಬೇರ್ಪಡಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ದೊರೆತ ಸುಳಿವಿನ ಮೇರೆಗೆ ಪೊಲೀಸ್ ಅರಣ್ಯ ಸಂಚಾರಿ ದಳದವರು ದಾಳಿ ಮಾಡಿ ಹುಲಿ ಚರ್ಮ, ಉಗುರು, ಕಾಲು, ಮೀಸೆಗಳನ್ನು ವಶಪಡಿಸಿ ಕೊಂಡಿದ್ದು, ಈ ಸಂಬAಧ ನಾಲ್ವರನ್ನು ಬಂಧಿಸಲಾಗಿದೆ. ಆದರೆ, ಬೇಟೆಗಾರರೊಂದಿಗೆ ಶಾಮೀಲಾ ಗಿರುವ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದು, ಸಾರ್ವಜನಿಕರು ಮೇಲಧಿಕಾರಿಗಳ ಗಮನಕ್ಕೆ ತಂದ ಬಳಿಕ ಬೇಟೆ ಯಾಡಿರುವದು ಖಾತರಿಯಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಹಾಗೂ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಸಿದ್ದಾಪುರ ಠಾಣಾ ವ್ಯಾಪ್ತಿಯ ದಿಡ್ಡಳ್ಳಿ ಬಳಿಯ ತಟ್ಟಳ್ಳಿಯಲ್ಲಿ ಹುಲಿಯನ್ನು ಗುಂಡಿಕ್ಕಿ ಹತ್ಯೆಗೈದು, ಅದರ ಚರ್ಮವನ್ನು ಬೇರ್ಪಡಿಸಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸ್ ಅರಣ್ಯ ಸಂಚಾರಿ ದಳದವರಿಗೆ ದೊರೆತ ಮಾಹಿತಿಯನ್ವಯ ಸಂಚಾರಿ ದಳದವರು ದಾಳಿ ಮಾಡಿ ಚರ್ಮ ಹಾಗೂ ಇತರ ಭಾಗಗಳನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿ ನಾಗರಹೊಳೆ ವನ್ಯಜೀವಿ ವಲಯದ ಆನೆಚೌಕೂರು ವಿಭಾಗದ ಹುಣಸೂರು ವಲಯ ಅರಣ್ಯಾಧಿಕಾರಿಗಳಿಗೆ ಪ್ರಕರಣವನ್ನು ಹಸ್ತಾಂತರಿಸಿದ್ದರು. ಆದರೆ, ಬೇಟೆ ಮಾಡಿದ ಪ್ರಮುಖ ಆರೋಪಿಯ ಮೇಲೆ ಯಾವದೇ ಕ್ರಮ ಕೈಗೊಳ್ಳದೆ ಬೇಟೆಯಾಡಿರುವ ವಿಚಾರವನ್ನು ಮರೆಮಾಚಿ, ಮಾಲ್ದಾರೆ ಬಳಿ ಮಾರಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಲಾಗಿದೆ ಎಂದು ಮೊಕದ್ದಮೆ ದಾಖಲಿಸಲಾಗಿತ್ತು. ಈ ಬಗ್ಗೆ ಕೊಡಗು ಏಕೀಕರಣ ರಂಗದವರು ರಾಜ್ಯದ ಮೇಲಧಿಕಾರಿಗಳ ಗಮನಕ್ಕೆ ತಂದ ಬಳಿಕ ಮೇಲಧಿಕಾರಿಗಳ ಆದೇಶದಂತೆ ಮನೆಯೊಂದರ ಮೇಲೆ ದಾಳಿ ಮಾಡಿದ ಸಂದರ್ಭ ಬೇಟೆಗೆ ಬಳಸಲಾದ ಕೋವಿ, ಮದ್ದು ಗುಂಡುಗಳು, ಪ್ರಾಣಿ ಬೇಟೆಗೆ ಬಳಸಲಾಗುವ ಉರುಳುಗಳು ಹಾಗೂ ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ. ಇದರೊಂದಿಗೆ ಅರಣ್ಯ ಇಲಾಖೆಯಿಂದ ಅಳವಡಿಸಲಾಗಿದ್ದ ಗುಪ್ತ ಕ್ಯಾಮರಾ ಕೂಡ ಸಿಕ್ಕಿದೆ..!
ಹಾಡಿ ವಾಸಿಗಳ ಬಂಧನ..!
ಹುಲಿ ಬೇಟೆ ಪ್ರಕರಣಕ್ಕೆ ಸಂಬAಧಿಸಿ ದಂತೆ ಪೊಲೀಸ್ ಅರಣ್ಯ ಸಂಚಾರಿ ದಳದವರು ತಾ.೧೪ರಂದು ನಾಲ್ವರನ್ನು ಬಂಧಿಸಿದ್ದಾರೆ.
(ಮೊದಲ ಪುಟದಿಂದ) ನಾಗರ ಹೊಳೆ ಹುಲಿ ಸಂರಕ್ಷಣಾ ಬಫರ್ ವಲಯದ ಅರಣ್ಯದಲ್ಲಿ ಸತ್ತು ಬಿದ್ದಿದ್ದ ಒಂದು ಹುಲಿಯ ಚರ್ಮ ಹಾಗೂ ಇತರ ಸ್ವತ್ತುಗಳನ್ನು ಮಾಲ್ದಾರೆ - ಸಿದ್ದಾಪುರ ಮುಖ್ಯ ರಸ್ತೆಯ ಜೋಸ್ ಕುರಿಯ ಎಂಬವರ ತೋಟದ ಬಳಿ ರಸ್ತೆ ಬದಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಟ್ಟಳ್ಳಿ ಹಾಡಿಯ ಜೆ.ಜೆ. ರಾಜೇಶ್, ಜೆ.ಜೆ. ಹರೀಶ್, ಜೆ.ಕೆ. ವಿನು ಹಾಗೂ ಜೆ.ಬಿ. ರಮೇಶ್ ಅವರುಗಳನ್ನು ಬಂಧಿಸಲಾಗಿದೆ. ಬಂಧಿತರಿAದ ಒಂದು ಹುಲಿ ಚರ್ಮ, ಏಳು ಉಗುರುಗಳು, ಎರಡು ಕಾಲಿನ ತುಂಡುಗಳು, ಒಂಭತ್ತು ಮೀಸೆಗಳು ಹಾಗೂ ಒಂದು ಪ್ಲಾಸ್ಟಿಕ್ ಚೀಲ ವಶಪಡಿಸಿಕೊಳ್ಳಲಾಗಿದೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆ ೧೯೭೨ ಶೆಡ್ಯೂಲ್ ೧ರಲ್ಲಿ ಅಪರಾಧವಾಗಿರುವದರಿಂದ ಆರೋಪಿಗಳ ವಿರುದ್ಧ ೦೨/೨೦೨೨ ವಿಧಿ- ೯,೩೯,೩(ಎ)(ಬಿ) ೪೪,೪೯, ರೆ/ವಿ ೫೧ ಡಬ್ಲೂö್ಯ ಎಲ್.ಪಿ. ಆಕ್ಟ್ ಶೆಡ್ಯೂಲ್ ೧ರಡಿ ಮೊಕದ್ದಮೆ ದಾಖಲಿಸಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕಿ ಸಿ.ಯು. ಸವಿ ಪ್ರಕರಣವನ್ನು ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಿಗೆ ಹಸ್ತಾಂತರಿಸಿದ್ದಾರೆ. ಅಲ್ಲಿಂದ ಹೆಚ್ಚಿನ ತನಿಖೆಗಾಗಿ ನಾಗರಹೊಳೆ ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರವಾಗಿತ್ತು. ಅಧಿಕಾರಿಗಳು ನಾಲ್ವರನ್ನು ನ್ಯಾಯಾಂಗ ಬಂಧನÀಕ್ಕೊಪ್ಪಿಸಿದ್ದಾರೆ.
ಅರಣ್ಯಾಧಿಕಾರಿ ಸಂಬAಧಿ ಆರೋಪಿ..!
ಈ ಪ್ರಕರಣದಲ್ಲಿ ಹುಲಿ ಬೇಟೆ ಮಾಡಿದ ನೈಜ ಆರೋಪಿಯನ್ನು ಮರೆಮಾಚಿ, ಹಾಡಿಯ ಕಾರ್ಮಿಕರನ್ನು ಬಂಧಿಸಲಾಗಿದೆ. ಅಧಿಕಾರಿಗಳು ಆಮಿಷಕ್ಕೊಳಗಾಗಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕೆಂದು ಕೊಡಗು ಏಕೀಕರಣ ರಂಗದವರು ಅರಣ್ಯ ಸಂಚಾರಿ ದಳದ ರಾಜ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಸೂಚನೆ ಮೇರೆಗೆ ನಾಗರಹೊಳೆ ಆನೆ ಚೌಕೂರು ಅರಣ್ಯ ಅಧಿಕಾರಿಗಳು ನಿವೃತ್ತ ಅರಣ್ಯಾಧಿಕಾರಿ ಬೆಳ್ಯಪ್ಪ ಅವರ ಸಹೋದರ ವೀರಪ್ಪ ಅವರ ಪುತ್ರ ಮನೋಜ್ (ಮನು) ಎಂಬಾತನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮನು ತಲೆಮರೆಸಿಕೊಂಡಿದ್ದು, ಮನೆಯಲ್ಲಿ ಹುಲಿಯ ಹಲ್ಲು ಸೇರಿದಂತೆ ಇತರ ಪರಿಕರಗಳು ಲಭಿಸಿವೆ..!
ಕ್ಯಾಮರಾ ಟ್ರಾö್ಯಪ್ ಎಗರಿಸಿದ್ದ..!
ಮನು ಮನೆಯನ್ನು ಅಧಿಕಾರಿಗಳು ಶೋಧಿಸುತ್ತಿದ್ದಂತೆ ಮನೆಯೊಳಗಡೆ ಬೇಟೆಗೆ ಬಳಸಲಾದ ಬಂದೂಕು, ಮದ್ದು ಗುಂಡುಗಳು, ಪ್ರಾಣಿ ಬೇಟೆಗೆ ಬಳಸಲಾಗುವ ಉರುಳುಗಳು ಹಾಗೂ ಬಚ್ಚಲು ಮನೆಯಲ್ಲಿ ಬಚ್ಚಿಟ್ಟಿದ್ದ ಹುಲಿಯ ಹಲ್ಲುಗಳು ಪತ್ತೆಯಾಗಿವೆ. ಇದರೊಂದಿಗೆ ಎರಡು ಕೆಜಿಯಷ್ಟು ಶ್ರೀಗಂಧದ ತುಂಡುಗಳು ಕೂಡ ಸಿಕ್ಕಿವೆ. ಅಷ್ಟೇ ಅಲ್ಲ ಅರಣ್ಯ ಇಲಾಖೆ ವತಿಯಿಂದ ಅರಣ್ಯದೊಳಗಡೆ ನಡೆಯುವ ಅಕ್ರಮಗಳನ್ನು ಪತ್ತೆಹಚ್ಚಲು ಹಾಗೂ ಪ್ರಾಣಿಗಳ ಚಲನವಲನಗಳನ್ನು ಕಂಡು ಹಿಡಿಯಲು ಅಳವಡಿಸಲಾಗಿದ್ದ ವಿಜಿಲೆನ್ಸ್ ಕ್ಯಾಮರಾ ಟ್ರಾö್ಯಪ್ ಅನ್ನು ಕಳವು ಮಾಡಿ ಮನೆಯಲ್ಲಿಟ್ಟಿರುವದು ಪತ್ತೆಯಾಗಿದೆ..!
ಕಾರ್ಮಿಕರು ಬಲಿಪಶು..!
ಈ ಪ್ರಕರಣದಲ್ಲಿ ಆರೋಪಿ ಎಂದು ಹೇಳಲಾಗುತ್ತಿರುವ ಮನು ಬೇಟೆ ಮಾಡಿ ಕಾರ್ಮಿಕರಾದ ಹಾಡಿ ನಿವಾಸಿಗಳನ್ನು ಬಳಸಿಕೊಂಡು ಹುಲಿಯ ದೇಹದಿಂದ ಚರ್ಮ, ಉಗುರು, ಹಲ್ಲು, ಮೀಸೆಗಳನ್ನು ಬೇರ್ಪಡಿಸಿದ್ದಾನೆ. ದೇಹವನ್ನು ಮಣ್ಣಿನಲ್ಲಿ ಹೂತುಹಾಕಲಾಗಿದೆ. ನಂತರ ತಾನೇ ವ್ಯಾಪಾರಿಗಳ ಮೂಲಕ ವ್ಯಾಪಾರ ಕುದುರಿಸಿ, ಮಾರಾಟಕ್ಕೆ ಯತ್ನಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಇದೀಗ ಹಾಡಿವಾಸಿಗಳೇ ಮಾರಾಟ ಮಾಡುತ್ತಿದ್ದರು ಎಂದು ಮೊಕದ್ದಮೆ ದಾಖಲು ಮಾಡಲಾಗಿದೆ. ಕಾರ್ಮಿಕರ ಬಂಧನವಾಗಿದೆ..!
ರಕ್ಷಣೆಗೆ ಯತ್ನ..!
ಮೇಲಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ಮನು ಮನೆ ಮೇಲೆ ದಾಳಿ ನಡೆಸಲಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಮನು ಮಡಿಕೇರಿ ಕಡೆಗೆ ದೌಡಾಯಿಸಿದ್ದಾನೆ. ಮಡಿಕೇರಿ ನಗರಸಭಾ ಸದಸ್ಯರೋರ್ವರ ಸಹಕಾರದೊಂದಿಗೆ ಜನಪ್ರತಿನಿಧಿಗಳ ಬಳಿಗೆ ತೆರಳಿ ರಕ್ಷಣೆ ಮಾಡುವಂತೆ ಮೊರೆಹೋಗಿರುವ ಬಗ್ಗೆ ತಿಳಿದು ಬಂದಿದೆ..!
ಹುಲಿ ಸಾಕು ಪ್ರಾಣಿಗಳ ಮೇಲೆ, ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದರೂ, ರೈತಾಪಿ ವರ್ಗದವರು ಭಯಭೀತಿಯೊಂದಿಗೆ ನಷ್ಟ ಅನುಭವಿಸುತ್ತಿದ್ದರೂ ಹುಲಿ ಸೆರೆ ಹಿಡಿಯಲು, ನಿಯಂತ್ರಣಕ್ಕೆ ತರುವಲ್ಲಿ ಮೀನಾಮೇಷ ಎಣಿಸುತ್ತಾ ಕಾನೂನಿನ ಸಬೂಬು ಹೇಳುವ ಅಧಿಕಾರಿ ವರ್ಗದವರು ಸಮಾಜಘಾತುಕ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರ ರಕ್ಷಣೆಗೆ ನಿಂತಿರುವದು ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ..! ?ಸಂತೋಷ್