ಸಿಲುಕಿ ವ್ಯಕಿಯೋರ್ವ ಸಾವನ್ನಪ್ಪಿರುವ ಘಟನೆ ಮಾಲ್ದಾರೆ ಸಮೀಪದ ಗದ್ದಿಗೆ ಬೆಟ್ಟದಲ್ಲಿ ನಡೆದಿದೆ.

ಪ್ರತಿ ಸೋಮವಾರದಂದು ಮಾಲ್ದಾರೆಯ ಗದ್ದಿಗೆ ಬೆಟ್ಟದಲ್ಲಿರುವ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಸೋಮವಾರದಂದು ಪಿರಿಯಾಪಟ್ಟಣ ತಾಲೂಕು ನವಿಲೂರು ಕರಡಿಬೆಟ್ಟ ಹಾಡಿಯ ನಿವಾಸಿ ಶಿವಣ್ಣ (೫೦) ಎಂಬವರು ಪೂಜೆಗೆಂದು ತೆರಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದ್ದು, ಪರಿಣಾಮ ಶಿವಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೇವಸ್ಥಾನದ ಅರ್ಚಕರಾದ ಮಲ್ಲಿಕಾ ಎಂಬವರು ಪೂಜೆಗೆ ತೆರಳುವ ಸಂದರ್ಭ ಮೃತದೇಹ ಕಂಡು ಬಂದಿದೆ.

ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಉಪವಲಯ ಅರಣ್ಯ ಅಧಿಕಾರಿ ಚೇರನ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಶ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಮೃತರು ಪತ್ನಿ ಹಾಗೂ ೬ ಮಕ್ಕಳನ್ನು ಅಗಲಿದ್ದಾರೆ.

ಮೃತದೇಹವನ್ನು ಪಿರಿಯಾಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.