ವೀರಾಜಪೇಟೆ, ಫೆ. 13: ಕ್ರೀಡಾ ಸಂಸ್ಥೆಗಳು ಕ್ರೀಡೆಗಳಿಗೆ ಉತ್ತೇಜನ ನೀಡುವಂತೆ ಸಮಾಜದ ಒಳಿತಿಗಾಗಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಸಲಹೆಯಿತ್ತರು.
ಕೂರ್ಗ್ ಕಾವೇರಿ ಬ್ರಿಗೇಡಿಯರ್ಸ್ ಸ್ಪೋಟ್ರ್ಸ್ ಕ್ಲಬ್ ವೀರಾಜಪೇಟೆ ವತಿಯಿಂದ ತಾಲೂಕು ಮೈದಾನದಲ್ಲಿ ಅಯೋಜಿಸಲಾಗಿದ್ದ ಆರನೇ ವರ್ಷದ ರಾಷ್ಟ್ರಮಟ್ಟದ ಪುರುಷರ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾಪಟು ಮತ್ತು ಪಟ್ಟಣ ಪಂಚಾಯಿತಿ ಸದಸ್ಯ ಮಹಾದೇವ್ (ಸುಭಾಷ್) ಮಾತನಾಡಿ ಕ್ರೀಡೆಯಲ್ಲಿ ಕ್ರೀಡಾಪಟುಗಳ ಭಾಗವಹಿಸುವಿಕೆ ಮುಖ್ಯ ಎಂದರು.
ಆಯೋಜಕ ಸಂಸ್ಥೆಯ ಸಂಚಾಲಕರಾದ ಸುಮನ್ ಕುಟ್ಟನ್ ಮತನಾಡಿ, ಸಿ.ಸಿ.ಬಿ. ಸ್ಪೋಟ್ರ್ಸ್ ಕ್ಲಬ್ ಐದು ವರ್ಷಗಳಿಂದ ಕ್ರೀಡಾ ಉತ್ಸವ ಅಯೋಜಿಸಿಕೊಂಡು ಬರುತಿದ್ದು, ಪ್ರಸ್ತುತ ಪಂದ್ಯಾವಳಿಯಲ್ಲಿ ಒಟ್ಟು 48 ತಂಡಗಳು ಭಾಗವಹಿಸುತ್ತಿವೆÉ. ನಾಕೌಟ್ ಮಾದರಿಯಲ್ಲಿ ಪಂದ್ಯಾಟಗಳು ನಡೆಯಲಿದೆ ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಲಾಗುತ್ತಿದೆ ಎಂದು ಹೇಳಿದರು.
ಸಿ.ಸಿ.ಬಿ ಸ್ಪೋಟ್ರ್ಸ್ ಕ್ಲಬ್ ವೀರಾಜಪೇಟೆ ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳು ಕ್ರೀಡಾ ತಂಡಗಳ ಮಾಲೀಕರು ಕ್ರೀಡಾ ಪಟುಗಳು, ಕ್ರೀಡಾಭಿಮಾನಿಗಳು ಹಾಜರಿದ್ದರು.