ಮಡಿಕೇರಿ, ಫೆ. 13: ಹೊದ್ದೂರು ಗ್ರಾಮದ ಶ್ರೀ ಶಾಸ್ತ ಈಶ್ವರ ದೇವಾಲಯದ 1ನೇ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಕೋಲ ತಾ. 16 ರಿಂದ 18ರ ವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬ್ರಹ್ಮಶ್ರೀ ತಳಿಪರಂಬ್ ಪುದ್ಸೇರಿಲಾ ಶಂಕರನ್ ನಂಬೋದರಿ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಕಂಕರ್ಯಗಳು ಜರುಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ತಾ. 16 ರಂದು ಸಂಜೆ 4 ಗಂಟೆಗೆ ಆಚಾರ್ಯ ವರಣ, 5 ಗಂಟೆಗೆ ಪುಣ್ಯಾಹವನ ಶುದ್ದಿ, 6.30ಕ್ಕೆ ಪ್ರಸಾದ ಶುದ್ದಿ, 7 ಗಂಟೆಗೆ ದೀಪಾರಾಧನೆ, 7.15ಕ್ಕೆ ದುರ್ಗಾಪೂಜೆ, 8.30ಕ್ಕೆ ಮಂಗಳಾರತಿ ಹಾಗೂ ರಾತ್ರಿ 9 ಗಂಟೆಗೆ ಶ್ರೀಶಾಸ್ತ-ಈಶ್ವರ ದೈವದ ಮಹಾಪೂಜೆ ನಡೆಯಲಿದೆ.
ತಾ. 17 ರಂದು ಬೆಳಿಗ್ಗೆ 6 ಗಂಟೆಗೆ ಅಭಿಷೇಕ ಪೂಜೆ, 7 ಗಂಟೆಗೆ ಗಣಹೋಮ, 7.15ಕ್ಕೆ ಮಹಾಮೃತ್ಯಂಜಯ ಪೂಜೆ, 7.30ಕ್ಕೆ ಉಷಾ ನೈವೇದ್ಯ ಪೂಜೆ, 8 ಗಂಟೆಗೆ ದೃಢ ಕಲಶ ಪೂಜೆ, 8.30ಕ್ಕೆ ದೃಢ ಕಲಶ ಅಭಿಷೇಕ ಪೂಜೆ, 9.30ಕ್ಕೆ ಭೂತ ಬಲಿ, ಶ್ರೀ ಬೇಟೆ ಅಯ್ಯಪ್ಪ ಸನ್ನಿಧಿ ಅಭಿಷೇಕ ಪೂಜೆ ಹಾಗೂ ಶ್ರೀ ಚಾಮುಂಡಿ ದೈವನೆಲಾ ಅಭಿಷೇಕ ಪೂಜೆ, 10.30ಕ್ಕೆ ಶ್ರೀ ವಿಷ್ಣು ಪೂಜೆ, 11 ಗಂಟೆಗೆ ಪ್ರತಿಷ್ಠಾ ವಾರ್ಷಿಕ ಬ್ರಹ್ಮಕಲಶ ಪೂಜೆ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಬ್ರಹ್ಮಕಲಶ ಅಭಿಷೇಕ ಹಾಗೂ ಮಹಾಪೂಜೆ ಜರುಗಲಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀ ಶಾಸ್ತ್ರ-ಈಶ್ವರ ದೇವರ ಉತ್ಸವ ಬಲಿ ಹಾಗೂ ಸಂಪ್ರೋಕ್ಷಣೆ ನಡೆಯಲಿದೆ.
ಮಧ್ಯಾಹ್ನ 3.30 ಗಂಟೆಗೆ ದೇವಾಲಯದಿಂದ ಹೊರಟು ಗ್ರಾಮದ ರಸ್ತೆಯ ಮೂಲಕ ಕಾವೇರಿ ಹೊಳೆಗೆ ತೆರಳಿ, ಅವಭೃತ ಸ್ನಾನ, ಅಲಂಕಾರದೊಂದಿಗೆ ಚಂಡೆ, ಮದ್ದಳೆಯ ಮೂಲಕ ರಾತ್ರಿ 8 ಗಂಟೆಯೊಳಗೆ ಶ್ರೀ ಶಾಸ್ತ್ರ-ಈಶ್ವರ ದೇವಾಲಯಕ್ಕೆ ಆಗಮಿಸಲಿದೆ. ವಿವಿಧ ನೃತ್ಯ ಕಾರ್ಯಕ್ರಮಗಳೊಂದಿಗೆ ಭಂಡಾರ, ಇಡುವುದು, ಸಂಪ್ರೋಕ್ಷಣೆ, ಮಹಾಪೂಜೆ ಹಾಗೂ ಮಂಗಳಾರತಿ ನಂತರ ರಾತ್ರಿ 10 ಗಂಟೆಗೆ ಶ್ರೀ ಚಾಮುಂಡಿ ಸನ್ನಿಧಾನದಲ್ಲಿ ತೋಯತ ತೆರೆ ಜರುಗಲಿದೆ.
ತಾ. 18 ರಂದು ಪ್ರಾತಃಕಾಲ 7 ಗಂಟೆಗೆ ಶ್ರೀ ವಿಷ್ಣು ಮೂರ್ತಿ ದೈವದ ಕೋಲ ಜರುಗಲಿದೆ. ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಪ್ರತಿದಿನ ರಾತ್ರಿ, ಬೆಳಗ್ಗೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ 9845571290, 9686545969 ಸಂಪರ್ಕಿಸಬಹುದಾಗಿದೆ.
ಶ್ರೀ ದೇವರ ವಾರ್ಷಿಕೋತ್ಸವದ ಪುಣ್ಯ ಕಾರ್ಯಕ್ಕೆ ದೇಣಿಗೆಯನ್ನು ನೀಡಲು ಇಚ್ಛಿಸುವ ಭಕ್ತಾಧಿಗಳು ಕೆನರಾ ಬ್ಯಾಂಕ್ ಮೂರ್ನಾಡು, ಖಾತೆ ಸಂಖ್ಯೆ : 11042200029212, IಈSಅ : ಅಓಖಃ0011104ಗೆ ನೀಡಬಹುದು.