*ಗೋಣಿಕೊಪ್ಪ, ಫೆ. 13: ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘ ಮತ್ತು ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘಕ್ಕೆ ಕಾವೇರಿ ಮಹಿಳಾ ಸಮಾಜದಲ್ಲಿ ನಡೆದ ಚುನಾವಣೆಯಲ್ಲಿ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಸಣ್ಣುವಂಡ ಕಿಶೋರ್ ನಾಚಪ್ಪ, ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷರಾಗಿ ರೆಜಿತ್‍ಕುಮಾರ್ ಗುಹ್ಯ ಅವಿರೋಧವಾಗಿ ಆಯ್ಕೆಯಾದರು.

ಪೊನ್ನಂಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎನ್. ದಿನೇಶ್, ಖಜಾಂಚಿಯಾಗಿ ವಿ.ವಿ. ಅರುಣ್‍ಕುಮಾರ್, ನಿರ್ದೇಶಕರಾಗಿ ಮಂಡೇಡ ಅಶೋಕ್, ಮಚ್ಚಮಾಡ ಅನೀಶ್ ಮಾದಪ್ಪ ಅವಿರೋಧವಾಗಿ ಆಯ್ಕೆಯಾದರು.

ವೀರಾಜಪೇಟೆ ತಾಲೂಕು ಉಪಾಧ್ಯಕ್ಷರಾಗಿ ಪುತ್ತಂ ಪ್ರದೀಪ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಎಸ್. ಮುಸ್ತಫಾ, ಕಾರ್ಯದರ್ಶಿಯಾಗಿ ಬಡಕಡ ರಜಿತಾ ಕಾರ್ಯಪ್ಪ, ನಿರ್ದೇಶಕರಾಗಿ ಎಂ.ಎನ್. ಹೇಮಂತ್, ಡಿ. ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.

ವೀಕ್ಷಕರಾಗಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎ. ಆದಿತ್ಯ, ಪ್ರ. ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಉಸ್ತುವಾರಿಯಾಗಿ ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಪಪ್ಪ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಬಿ.ಇ. ಕಿರಣ್, ವಿ.ಕೆ. ಪ್ರತಾಪ್ ಕಾರ್ಯನಿರ್ವಹಿಸಿದರು.

ಸೋಮವಾರಪೇಟೆ ತಾಲೂಕು

ಸೋಮವಾರಪೇಟೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಕ್ತಿ ವರದಿಗಾರ ವಿಜಯ್ ಹಾನಗಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರಜಾವಾಣಿ ಪತ್ರಿಕೆಯ ಡಿ.ಪಿ. ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪತ್ರಿಕಾಭವನ ಸಭಾಂಗಣದಲ್ಲಿ ನಡೆದ 2022-25ರ ಅವಧಿಯ ಚುನಾವಣಾ ಪ್ರಕ್ರಿಯೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಚಿತ್ತಾರ ವಾಹಿನಿಯ ವಿಶ್ವ ಕುಂಬೂರು, ಕಾರ್ಯದರ್ಶಿಯಾಗಿ ವಿಜಯವಾಣಿಯ ದಿನೇಶ್ ಮಾಲಂಬಿ, ಖಜಾಂಚಿಯಾಗಿ ವಿಶ್ವವಾಣಿಯ ಬಿ.ಎ. ಭಾಸ್ಕರ್, ನಿರ್ದೇಶಕರಾಗಿ ಶಕ್ತಿ ಪತ್ರಿಕೆಯ ಹೆಚ್.ಕೆ. ಭಾಸ್ಕರ್, ಆಂದೋಲನ ವರದಿಗಾರ ಲಕ್ಷ್ಮೀಕಾಂತ್ ಕೊಮಾರಪ್ಪ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.