ಚೆಟ್ಟಳ್ಳಿ, ಫೆ. 13: ಇತ್ತೀಚೆಗೆ ನಡೆದ ಚೆಟ್ಟಳ್ಳಿಯ ಗ್ರಾಮಸಭೆಯಲ್ಲಿ ಕಾಂಗ್ರೆಸ್ ಮಹಿಳಾ ಜನಪ್ರತಿನಿಧಿಯ ಕೈಯಿಂದ ಮೈಕ್ ಎಳೆದು ಅನುಚಿತವಾಗಿ ವರ್ತಿಸುವ ಮೂಲಕ ಬಲ್ಲಾರಂಡ ಮಣಿ ಉತ್ತಪ್ಪ ದೌರ್ಜನ್ಯ ಎಸಗಿದ್ದಾರೆ. ಅವರನ್ನು ಈ ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಚೆಟ್ಟಳ್ಳಿಯಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.

ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್‍ನ ಮುಖಂಡರುಗಳು ಬಿಜೆಪಿ ಹಾಗೂ ಮಣಿ ಮುತ್ತಪ್ಪ ಅವರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿದರು.

ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೆÇನ್ನಣ್ಣ ಮಾತನಾಡಿ ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದ್ದು ಅನ್ಯಾಯಕ್ಕೊಳಗಾದ ಮಹಿಳೆ ದೂರು ನೀಡಿ ಹತ್ತು ದಿನಗಳು ಕಳೆದರೂ ಪೆÇಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಪ್ರಭಾವಕ್ಕೆ ಒಳಗಾಗಿ ಠಾಣೆಯಲ್ಲೇ ಜಾಮೀನು ನೀಡಿ ಕಳಿಸಿದ್ದಾರೆ.

ಕಾನೂನನ್ನು ಎಲ್ಲರೂ ಗೌರವಿಸಬೇಕಾಗಿದ್ದು ಪೆÇೀಲಿಸರು ಪ್ರಭಾವಿಗಳಿಗೆ ಒಂದು ಕಾನೂನು. ಸಾಮಾನ್ಯ ಜನತೆಗೊಂದು ಕಾನೂನೆಂಬ ನೀತಿಯನ್ನು ಅನುಸರಿಸುತ್ತಿರುವುದು ಸರಿಯಾದ ನಡೆಯಲ್ಲ ಕೂಡಲೇ ತನಿಖೆ ನಡೆಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ಮಹಿಳಾ ಜನಪ್ರತಿನಿಧಿಯ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಚೆಟ್ಟಳ್ಳಿ ಗ್ರಾಮದಲ್ಲಿ ಪ್ರತಿಭಟನೆ ಮೂಲಕ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಗಡಿಪಾರಿಗೆ ಒತ್ತಾಯಿಸಿದ್ದೇವೆ.

ಓರ್ವ ಜನ ಪ್ರತಿನಿಧಿಯೂ ಆಗಿರುವ ಮಣಿ ಉತ್ತಪ್ಪ ಚೆಟ್ಟಳ್ಳಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಮಹಿಳಾ ಜನಪ್ರತಿನಿಧಿಯೊಂದಿಗೆ ಅಸಭ್ಯವಾಗಿ ವರ್ತಿಸುವ ಮೂಲಕ ಕೈ ಮಾಡಿ ದೌರ್ಜನ್ಯ ಎಸಗಿರುವ ಪ್ರಕರಣ ನಾಚಿಕೆಗೇಡಿನ ವಿಷಯವಾಗಿದೆ. ಪೆÇಲೀಸರು ತಾರತಮ್ಯ ನೀತಿ ಅನುಸರಿಸದೆ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ಕೆಪಿಸಿಸಿ ವಕ್ತಾರ ಚಂದ್ರಮೌಳಿ ಮಾತನಾಡಿ ಪ್ರತಿಯೊಬ್ಬರು ಸಂವಿಧಾನಕ್ಕೆ ಗೌರವ ನೀಡುವ ಮೂಲಕ ಕಾನೂನು ಪಾಲಿಸಬೇಕಾಗಿದೆ. ಪ್ರಕರಣವನ್ನು ಪೆÇಲೀಸರು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ಮಂಥರ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ. ಪಿ ಶಶಿಧರ್ ಮಾತನಾಡಿದರು.

ಈ ಸಂದರ್ಭ ಮಾಜಿ ಸಚಿವ ಬಿ.ಎ ಜೀವಿಜಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಕಾಂಗ್ರೆಸ್ ಮುಖಂಡರುಗಳಾದ ನಟೇಶ್ ಗೌಡ, ಶಾಹಿದ್ ಟಿ. ಪಿ ರಮೇಶ್, ಮುನೀರ್ ಅಹಮದ್, ಲೋಕೇಶ್, ಕಾಂತರಾಜು, ಹಂಸ ಕೊಟ್ಟಮುಡಿ, ಇಸ್ಮಾಯಿಲ್, ಅನಂತ್ ಕುಮಾರ್, ಮಿಥುನ್, ಮಂಜುನಾಥ್, ಉಸ್ಮಾನ್ ಸುಂಟಿಕೊಪ್ಪ, ಮಂಜುನಾಥ್ ಗುಂಡೂರಾವ್, ಹ್ಯಾರಿಸ್, ಹಕೀಮ್, ರಂಜಿ ಪೂಣಚ್ಚ, ಸತೀಶ್, ಸೂರಜ್, ಬೋಪಣ್ಣ, ನವೀನ್, ಕಿರಣ್, ಸಫಿಯಾ ಮೊಹಮ್ಮದ್, ಸುಹಾದ ಅಶ್ರಫ್, ಸಲಾಂ, ಪಪ್ಪು ತಿಮ್ಮಯ್ಯ, ತೀರ್ಥಕುಮಾರ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಪ್ಪ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗೀಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಸೇರಿದಂತೆ ಮತ್ತಿತರರು ಇದ್ದರು.