ಮಡಿಕೇರಿ, ಫೆ. 11: ಕೊಡಗು ಪ್ರೆಸ್‍ಕ್ಲಬ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಮಹಾಂತೇಶ ಮಾದವ ಅವರಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ಮಾಧವಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಚಲನಚಿತ್ರ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಪ್ರೆಸ್‍ಕ್ಲಬ್ ಸಹ ಕಾರ್ಯದರ್ಶಿ ಪ್ರಜ್ಞಾ ರಾಜೇಂದ್ರ ಉಪಸ್ಥಿತರಿದ್ದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲಾವಿದರಾದ ದಿವ್ಯಶ್ರಿ ನಾಯಕ್ ಹಾಗೂ ಶರತ್ ಬೋಪಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಗಾಯನ ಸ್ಪರ್ಧೆ - ರಂಜಿತ್ ಪ್ರಥಮ
ನಾಟಕ ಪ್ರದರ್ಶನಕ್ಕೂ ಮುನ್ನ ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಕ್ಲಬ್‍ನ ಸದಸ್ಯರಿಗೆ ಹಾಗೂ ಸದಸ್ಯರ ಮಕ್ಕಳಿಗೆ ಗೀತಗಾಯನ ಸ್ಪರ್ಧೆ ನಡೆಯಿತು. ಸದಸ್ಯರ ವಿಭಾಗದಲ್ಲಿ ಉಜ್ವಲ್ ರಂಜಿತ್ ಪ್ರಥಮ, ರೆಜಿತ್‍ಕುಮಾರ್ ಗುಹ್ಯ ದ್ವಿತೀಯ ಹಾಗೂ ಪ್ರಜ್ಞಾ ರಾಜೇಂದ್ರ ತೃತೀಯ ಸ್ಥಾನ ಪಡೆದರು. ಸದಸ್ಯರ ಮಕ್ಕಳ ವಿಭಾಗದಲ್ಲಿ ಸಿದ್ದಾಪುರದ ಪತ್ರಕರ್ತ ವಾಸು ಅವರ ಪುತ್ರಿ ಸಮೃದ್ಧಿ ವಾಸು ಪ್ರಥಮ, ವೀರಾಜಪೇಟೆಯ ಪತ್ರಕರ್ತ ರವಿಕುಮಾರ್ ಅವರ ಪುತ್ರಿ ಅಪೂರ್ವ ರವಿಕುಮಾರ್ ದ್ವಿತೀಯ, ಕುಶಾಲನಗರದ ಪತ್ರಕರ್ತ ಪ್ರಭುದೇವ್ ಅವರ ಪುತ್ರಿ ಇಂಚರಾ ಪ್ರಭುದೇವ್ ತೃತೀಯ ಬಹುಮಾನ ಪಡೆದರು. ಪ್ರೆಸ್‍ಕ್ಲಬ್ ಸಹ ಕಾರ್ಯದರ್ಶಿ ಪ್ರಜ್ಞಾ ರಾಜೇಂದ್ರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.