ಮಡಿಕೇರಿ ಫೆ.11: ಬೆಳೆ ಹಾನಿ ಸಂಬಂಧ ಸರ್ಕಾರವು ಪರಿಹಾರದ ಮೊತ್ತವನ್ನು ಪರಿಷ್ಕರಿಸಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲಿ 15 ನೇ ಹಂತದಲ್ಲಿ ಈಗಾಗಲೇ ಪರಿಹಾರ ಪಾವತಿಸಿರುವ 42,427 ಮಂದಿ ರೈತರ ಬ್ಯಾಂಕ್ ಖಾತೆಗಳಿಗೆ ಈ ದಿನ ರೂ. 37.89 ಕೋಟಿ ಬೆಳೆ ಹಾನಿ ಪರಿಷ್ಕøತ ಪರಿಹಾರದ ವ್ಯತ್ಯಾಸದ ಮೊತ್ತವನ್ನು ಜಮೆ ಮಾಡಲಾಗಿದೆ.

ಇದರೊಂದಿಗೆ ಈ ವರ್ಷ ಬೆಳೆ ಹಾನಿ ಸಂಬಂಧ ಒಟ್ಟಾಗಿ ರೈತರ ಖಾತೆಗಳಿಗೆ ರೂ. 104.74 ಕೋಟಿ ಪರಿಹಾರ ವನ್ನು ಆಧಾರ್ ಬೇಸ್ಡ್ ಪೇಮೆಂಟ್ ಮೂಲಕ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.