ಶನಿವಾರಸಂತೆ, ಫೆ. ೧೦: ಸಮೀಪದ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಆಗಳಿ ಗ್ರಾಮದ ಗದ್ದೆಯಲ್ಲಿ ಮೇಯುತ್ತಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ತಿಂದು ಹಾಕಿರುವ ಘಟನೆ ನಡೆದಿದೆ.

ಗ್ರಾಮದ ರೈತ ಎ.ಎಸ್. ಕುಮಾರ್ ಅವರಿಗೆ ಸೇರಿದ ಕರುವಾಗಿದ್ದು, ಗದ್ದೆಯಲ್ಲಿ ಮೇಯಲು ಬಿಟ್ಟಿರುವಾಗ ಘಟನೆ ನಡೆದಿದೆ. ಶನಿವಾರಸಂತೆ ಪಶು ಚಿಕಿತ್ಸಾ ಕೇಂದ್ರದ ಪಶುವೈದ್ಯಾಧಿಕಾರಿ ಡಾ. ಸತೀಶ್ ಮಹಜರು ನಡೆಸಿದರು. ಚಿರತೆ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಮನೆಯಿಂದ ಹೊರ ಬರಲು ಹೆದರುವಂತಾಗಿದೆ.

ಶನಿವಾರಸAತೆ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಂಗಳವಾರದAದು ಈ ಘಟನೆ ನಡೆದಿದೆ. ಬುಧವಾರವೂ ಚಿರತೆ ತಿಂದು ಬಿಟ್ಟು ಹೋಗಿದ್ದ ಕರುವಿನ ಶರೀರವನ್ನು ಎಳೆದೊಯ್ಯುತ್ತಿ ರುವ ದೃಶ್ಯವನ್ನು ನೋಡಿದ ಕೆಲವು ಪ್ರತ್ಯಕ್ಷದರ್ಶಿ ಗ್ರಾಮಸ್ಥರು ಚಿರತೆ ಮನುಷ್ಯರ ಮೇಲೂ ದಾಳಿ ಮಾಡುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.