ಮಡಿಕೇರಿ, ಫೆ. ೧೦: ಕೂಟಿಯಾಲ ಸೇತುವೆ ಹಾಗೂ ರಸ್ತೆ ವಿಚಾರಕ್ಕೆ ಸಂಬAಧಿಸಿದAತೆ ಇತ್ತೀಚೆಗೆ ಸ್ಥಳೀಯ ಗ್ರಾಮಸ್ಥರ ಕೋರಿಕೆಯಂತೆ ಜಾಗದ ಖಚಿತತೆಗಾಗಿ ನಡೆಸಿದ ಜಂಟಿ ಸರ್ವೆಯ ವರದಿಯನ್ನು ಸಂಬAಧಿಸಿದವರು ಇನ್ನೂ ನೀಡಿಲ್ಲ. ಜನವರಿ ೧೮ರಂದು ಈ ಬಗ್ಗೆ ಸರ್ವೆ ನಡೆಸಲಾಗಿದೆ. ಕಂದಾಯ ಇಲಾಖೆ ಭೂ ದಾಖಲೆಗಳ ಇಲಾಖೆ, ಅರಣ್ಯ ಇಲಾಖೆಯ ಮೂಲಕ ಜಂಟಿ ಸರ್ವೆ ನಡೆಸಿದ್ದು, ಇದೀಗ ಸುಮಾರು ೨೫ ದಿನಗಳೇ ಕಳೆದಿವೆಯಾದರೂ ಸರ್ವೆಯ ವರದಿಯನ್ನು ನೀಡಿಲ್ಲ. ಈ ಜಾಗ ಪೈಸಾರಿಯೋ ಅಥವಾ ಅರಣ್ಯ ಇಲಾಖೆಗೆ ಸೇರಿದೆಯೋ ಎಂಬ ಬಗ್ಗೆ ಗೊಂದಲವಿರುವ ಹಿನ್ನೆಲೆಯಲ್ಲಿ ಜಂಟಿ ಸರ್ವೆ ಮೂಲಕ ಇರುವ ಸಂಶಯ ನಿವಾರಿಸುವಂತೆ ಸ್ಥಳೀಯರು ಕೋರಿದ್ದರು.