ಮಡಿಕೇರಿ, ಫೆ. 11: ವೀರಾಜಪೇಟೆಯ ಅಂಬಟ್ಟಿಯಲ್ಲಿ 3ನೇ ವರ್ಷದ ಅಂಬಟ್ಟಿ ಪ್ರೀಮಿಯರ್ ಲೀಗ್ ಅನ್ನು ನಡೆಸಲಾಯಿತು. ಸ್ಥಳೀಯ ಮಕ್ಕಳಿಗೆ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಒಟ್ಟು 6 ತಂಡಗಳು ಭಾಗವಹಿಸಿದ್ದು ಕ್ರಿಕೆಟಿನಲ್ಲಿ ಪ್ರಥಮ ಬಹುಮಾನವನ್ನು ಕಿಂಗ್ಸ್ ಇಲೆವೆನ್ ಅಂಬಟ್ಟಿ, ದ್ವಿತೀಯ ಬಹುಮಾನವನ್ನು ಕೆ.ಎ. ಬ್ರದರ್ಸ್ ತಂಡ ಗಳಿಸಿಕೊಂಡಿತು. ವಾಲಿಬಾಲ್‍ನಲ್ಲಿ ಅಂಬಟ್ಟಿ ಸ್ಟ್ರೈಕರ್ಸ್ ಪ್ರಥಮ, ಕೆ.ಎ. ಬ್ರದರ್ಸ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಪಂದ್ಯಾವಳಿಯಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕಿಂಗ್ಸ್ ಇಲೆವೆನ್ ತಂಡದ ಆಟಗಾರ ಸಮೀರ್ ಸಿ.ಕೆ., ಬೆಸ್ಟ್ ಆಲ್-ರೌಂಡರ್ ಪ್ರಶಸ್ತಿಯನ್ನು ಕೆ.ಎ. ಬ್ರದರ್ಸ್ ತಂಡದ ಆಟಗಾರ ಪ್ರಮೋದ್ ವಿ.ಎನ್., ಉತ್ತಮ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಅಂಬಟ್ಟಿ ಬುಲ್ಸ್ ತಂಡದ ಸಮೀರ್, ಬೆಸ್ಟ್ ಬಾಲರ್ ಪ್ರಶಸ್ತಿಯನ್ನು ಕೆ.ಎ. ಬ್ರದರ್ಸ್ ತಂಡದ ಮೊಜಾಂಬಿಲ್, ಉತ್ತಮ ನಾಯಕ ಪ್ರಶಸ್ತಿಯನ್ನು ಎ.ಎಸ್. ಸಜೀರ್, ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಬುಲ್ಸ್ ತಂಡದ ಸಂತೋಷ್, ಬೆಸ್ಟ್ ಅಪ್ ಕಮಿಂಗ್ ಪ್ಲೇಯರ್ ರಿಕ್ಕಿ ಪೊನ್ನಪ್ಪ, ಅಂತಿಮ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಎಂ.ಕೆ. ಸುಮಂತ್ ಹಾಗೂ ಫೇರ್ ಪ್ಲೇ ಅವಾರ್ಡ್‍ನ್ನು ಫೈಟರ್ಸ್ ಅಂಬಟ್ಟಿ ತಂಡವು ಪಡೆದುಕೊಂಡಿತು.

ಅಲ್ಲದೆ ವಾಲಿಬಾಲ್ ಪಂದ್ಯಾಟದಲ್ಲಿ ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ತೋಫಿಕ್, ಬೆಸ್ಟ್ ಅಪ್ ಕಮಿಂಗ್ ಆಟಗಾರ ಪ್ರಶಸ್ತಿಯನ್ನು ಫೈಜ್, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಫಾಸಿಲ್ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯ, ಸದಸ್ಯರುಗಳಾದ ನಾಯಡ ಸವಿ ಬೋಪಣ್ಣ, ಚೆಂಗಟ್ಟಿ ರಾಜ, ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಎ. ಯುಸುಫ್, ದಾನಿಗಳಾದ ನಿಜಾಂ ಕೆ.ವೈ., ಇರ್ಫಾನ್, ಸಲ್ಮಾ ಎ.ಎಸ್. ಕುಂಜು ಅಹಮ್ಮದ್, ಅಕ್ಲಾತಂಡ ಮೊಯ್ದು, ಕಾಳೇಂಗಡ ರಮೇಶ್, ಕೊಕ್ಕಂಡ ಜಿ. ಅಪ್ಪಣ್ಣ, ಲೋಹಿತ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.