ಶನಿವಾರಸಂತೆ, ಫೆ. ೧೦: ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಇರುವ ಹಿಂದೂ ಮಿಲ್ಟಿç ಹೊಟೇಲ್ನಲ್ಲಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುವು ಮಾಡಿಕೊಡುತ್ತಿರುವ ಬಗ್ಗೆ ದೊರೆತ ದೂರಿನ ಮೇರೆ ಶನಿವಾರಸಂತೆ ಪೊಲೀಸರು ದಾಳಿ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಪೊಲೀಸರು ಹೊಟೇಲ್ಗೆ ತೆರಳಿದಾಗ ಮದ್ಯ ಸೇವಿಸುತ್ತಿದ್ದವರು ಪರಾರಿಯಾಗಿದ್ದಾರೆ. ಅವರುಗಳಿಗೆ ಮದ್ಯದ ಪ್ಯಾಕೇಟ್, ಬೀರ್ ಬಾಟಲ್ ನೀಡುತ್ತಿದ್ದ ಹೊಟೇಲ್ ಮಾಲೀಕ ಶಿವಪ್ಪ ಶೆಟ್ಟಿ ಅವರ ಮೇಲೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.