ಸೋಮವಾರಪೇಟೆ, ಫೆ. ೧೦: ರಥಸಪ್ತಮಿ ಅಂಗವಾಗಿ ಇಲ್ಲಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ನಿರಂತರ ಯೋಗ ಕೇಂದ್ರದ ವತಿಯಿಂದ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.

ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಸಮೀಪದ ದೊಡಮಳ್ತೆ ಹೊನ್ನಮ್ಮತಾಯಿ ದೇವಾಲಯದ ಕೆರೆ ದಡದಲ್ಲಿ ೧೦೮ ಸೂರ್ಯ ನಮಸ್ಕಾರ ಮಾಡಲಾಯಿತು. ರಥಸಪ್ತಮಿಯ ಮಹತ್ವದ ಬಗ್ಗೆ ಸಂಸ್ಥೆಯ ಶಿಕ್ಷಕಿ ರಾಗಿಣಿ ಮಾಹಿತಿ ನೀಡಿದರು.

ನಿರಂತರ ಯೋಗ ಕೇಂದ್ರದ ವತಿಯಿಂದ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಯೋಗ ಶಿಕ್ಷಕ ಕಿಬ್ಬೆಟ್ಟ ಗಣೇಶ್ ನೇತೃತ್ವದಲ್ಲಿ ೧೦೮ ಸೂರ್ಯ ನಮಸ್ಕಾರ ನಡೆಯಿತು.