ಸುಂಟಿಕೊಪ್ಪ, ಫೆ. ೧೦: ಐಗೂರು ಗ್ರಾಮ ಪಂಚಾಯಿತಿ ಸರಕಾರದ ಅಮೃತ ಯೋಜನೆ ಯಡಿ ಸೇರ್ಪಡೆ ಯಾಗಿದ್ದು, ಕುಡಿಯುವ ನೀರು, ರಸ್ತೆ, ವಸತಿ, ವಿದ್ಯುತ್ ಸಂಪರ್ಕದ ಕಾಮಗಾರಿ ಪ್ರಗತಿ ಯಲಿದ್ದು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಂದರವಾದ ಉದ್ಯಾನವನ ನಿರ್ಮಿಸ ಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ತಿಳಿಸಿದರು. ಶಾಸಕ ಅಪ್ಪಚ್ಚು ರಂಜನ್ ಅವರ ಪರಿಶ್ರಮದಿಂದ ರೂ. ೮೪.೮೧ ಲಕ್ಷ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗಿದೆ. ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ. ಪರಿಶಿಷ್ಟ ಜಾತಿ ಪಂಗಡದವರಿಗೆ ವಿದ್ಯುತ್ ಜಲ ಜೀವನ್ ಯೋಜನೆಯಡಿ ಕುಡಿಯುವ ನೀರು, ಬಸವ ಯೋಜನೆಯಡಿ ವಸತಿ ನಿರ್ಮಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಗ್ರಾಮದಡಿ, ಕಸವಿಲೇವಾರಿ ಘಟಕ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಉದ್ಯೋಗಖಾತ್ರಿ ಯೋಜನೆಯಡಿ, ಪಂಚಾಯಿತಿ ಕಚೆೆÃರಿ ಮುಂಭಾಗದಲ್ಲಿ ಸುಂದರವಾದ ಹುಲ್ಲುಹಾಸಿನ ಉದ್ಯಾನವನ ನಿರ್ಮಿಸಲಾಗಿದೆ. ಸ್ವಚ್ಛತೆಗೆ ಪಂಚಾಯಿತಿ ಪ್ರಥಮ ಆದ್ಯತೆ ನೀಡುತ್ತಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷೆ ಜಾನಕಿ ಮೇದಪ್ಪ ಪಿಡಿಓ ಯಾದವ್ ತಿಳಿಸಿದರು.