ಮಡಿಕೇರಿ, ಫೆ. ೧೦: ರೋಟರಿ ಮಡಿಕೇರಿ ವತಿಯಿಂದ ಸಮುದಾಯ ಸೇವಾ ಯೋಜನೆಯಡಿ ದಾಸವಾಳ ಸಮೀಪದ ಅಂಗನವಾಡಿಯಲ್ಲಿ ೨೦ ಪುಟಾಣಿಗಳಿಗೆ ಕುರ್ಚಿ, ತಟ್ಟೆ, ಬಟ್ಟಲು ವಿತರಿಸಲಾಯಿತು.
ಸರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಎನ್.ಡಿ. ಅಚ್ಚಯ್ಯ ಹೊಸ ಕುರ್ಚಿಗಳ ಮೇಲೆ ಕುಳಿತು ತಟ್ಟೆ, ಬಟ್ಟಲುಗಳನ್ನು ಸ್ವೀಕರಿಸಿದ ಮಕ್ಕಳು ಸಂತೃಪ್ತಿಯಿAದ ಇರುವುದನ್ನು ನೋಡುವುದೇ ಒಂದು ಆನಂದ ಎಂದರು. ಕಾರ್ಯಕರ್ತೆ ಸುಜಾತ ಅವರು ಅಂಗನವಾಡಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಸಮುದಾಯ ಸೇವಾ ಯೋಜನೆಯ ಕುರಿತು ವಿವರಿಸಿದರು.
ಕಾರ್ಯದರ್ಶಿ ಲಲಿತಾ ರಾಘವನ್, ಪ್ರಮುಖರಾದ ಬಿ.ಎಸ್.ಚೆಂಗಪ್ಪ, ಅನಂತ ಸುಬ್ಬರಾವ್, ಅನಿಲ್ ಕೃಷ್ಣಾನಿ, ಸಮುದಾಯ ಸೇವಾ ನಿರ್ದೇಶಕಿ ಗೀತಾ ಗಿರೀಶ್ ಹಾಗೂ ಮಾಳಿಗೆ ಪೈ ಉಪಸ್ಥಿತರಿದ್ದರು.