ವೀರಾಜಪೇಟೆ, ಫೆ. ೧೦: ಭಾಗಮಂಡಲ ವ್ಯವಸ್ಥಾಪನಾ ಸಮಿತಿಗೆ ಕೊಡಗು ಹೆಗ್ಗಡೆ ಜನಾಂಗಕ್ಕೆ ಪ್ರಾತಿನಿಧ್ಯ ನೀಡಲೇಬೇಕು ಎಂದು ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಜಿ. ಅಯ್ಯಪ್ಪ ಆಗ್ರಹಿಸಿದ್ದಾರೆ.
ಕೊಡಗು ಜಿಲ್ಲಾಧಿಕಾರಿ, ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದು ಜಿಲ್ಲೆಯಲ್ಲಿ ಕೊಡವ ಜನಾಂಗವನ್ನು ಬಿಟ್ಟರೆ ಕೊಡಗು ಹೆಗ್ಗಡೆ ಜನಾಂಗ ಅತಿ ದೊಡ್ಡ ಜನಾಂಗವಾಗಿದೆ. ಪದ್ಧತಿ, ಪರಂಪರೆ, ಆಚಾರ, ವಿಚಾರ, ಎಲ್ಲವೂ ಕೊಡವ ಸಂಸ್ಕೃತಿಯಾಗಿದೆ. ಕಾವೇರಿಯನ್ನು ಪುರಾತನ ಕಾಲದಿಂದಲೂ ಪೂಜಿಸುತ್ತಾ ಬರಲಾಗುತ್ತಿದೆ. ಇದೀಗ ಮಾಡಿರುವ ನೇಮಕವನ್ನು ಪುನರ್ ಪರಿಶೀಲಿಸಿ ಜನಾಂಗಕ್ಕೆ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿದ್ದಾರೆ.