ಅಂಗಡಿ-ಮನೆಗಳಲ್ಲಿ ಮದ್ಯ ಮಾರಾಟ
ಗ್ರಾಮೀಣ ಭಾಗದ ಹಲವಷ್ಟು ಅಂಗಡಿಗಳು ಹಾಗೂ ಕೆಲವೊಂದು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದಿನಂಪ್ರತಿ ದೂರುಗಳು ಕೇಳಿಬರುತ್ತಿದ್ದು, ಇಂತಹ ಅಕ್ರಮಕ್ಕೆ ಅವಕಾಶ ನೀಡಬಾರದು ಎಂದು ಶಾಸಕರು, ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ಗೆ ನಿರ್ದೇಶನ ನೀಡಿದರು.
ಅಕ್ರಮ ಮದ್ಯ ಮಾರಾಟ ಹಾಗೂ ಕಳ್ಳ ಬಟ್ಟಿ ತಯಾರಿ ಪ್ರಕರಣಕ್ಕೆ ಸಂಬAಧಿಸಿದAತೆ ಕಳೆದ ಏಪ್ರಿಲ್ನಿಂದ ೧೫೪ ಮೊಕದ್ದಮೆ ದಾಖಲಿಸಲಾಗಿದೆ. ಅಬಕಾರಿ ನಿಯಮ ಉಲ್ಲಂಘನೆಯ ವಿವಿಧ ಪ್ರಕರಣಕ್ಕೆ ಸಂಬAಧಿಸಿದAತೆ ೧೦.೪೭ ಲಕ್ಷದಷ್ಟು ದಂಡ ವಿಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಹಣಕ್ಕೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಮುಂದಿನ ದಿನಗಳಲ್ಲಿ ಇಂತಹ ದೂರುಗಳು ಬರಬಾರದು ಎಂದು ಅಧಿಕಾರಿಗೆ ಶಾಸಕರು ನಿರ್ದೇಶಿಸಿದರು.ಕಸ ವಿಲೇವಾರಿ ಘಟಕ ಪೂರ್ಣಗೊಳಿಸಿ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ ನಿರ್ಮಾಣ ಸಂಬAಧ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಶಾಸಕರು, ಉಳಿದಿರುವ ಘಟಕಗಳ ನಿರ್ಮಾಣಕ್ಕೆ ಮಾರ್ಚ್ ಒಳಗೆ ಕ್ರಮ ಕೈಗೊಳ್ಳಬೇಕೆಂದು ಸರ್ವೆ, ಅರಣ್ಯ ಹಾಗೂ ಜಿ.ಪಂ. ಇಂಜಿನಿಯರಿAಗ್ ವಿಭಾಗಕ್ಕೆ ನಿರ್ದೇಶನ ನೀಡಿದರು.
ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಜಾಗದ ಸಮಸ್ಯೆಯಿದ್ದು, ಸರ್ವೆ ಇಲಾಖೆ ಮುಂದಿನ ೧೦ ದಿನಗಳ ಒಳಗೆ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಕೊಡ್ಲಿಪೇಟೆ, ಬೆಸೂರು, ಬ್ಯಾಡಗೊಟ್ಟ, ಹರದೂರು, ತೋಳೂರುಶೆಟ್ಟಳ್ಳಿ, ಶಿರಂಗಾಲ, ಗಣಗೂರು, ಕೊಡಗರಹಳ್ಳಿ, ನೆಲ್ಲಿಹುದಿಕೇರಿ, ೭ನೇ ಹೊಸಕೋಟೆ ಗ್ರಾಮಗಳ ಕಸವಿಲೇವಾರಿ ಘಟಕವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರು.
ಪ್ರಾಪರ್ಟಿ ಕಾರ್ಡ್ ವಾಪಸ್ ನೀಡಿ: ಈ ಹಿಂದೆ ಸರ್ವೆ ಇಲಾಖೆಯಿಂದ ಹಲವಷ್ಟು ಮಂದಿಗೆ ಪ್ರಾಪರ್ಟಿ ಕಾರ್ಡ್ ನೀಡಲಾಗಿದ್ದು, ಇಂತಹ ಪ್ರಕರಣಗಳಿಗೆ ಹೊಸದಾಗಿ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಾಪರ್ಟಿ ಕಾರ್ಡ್ಗಳನ್ನು ಇಲಾಖೆಗೆ ವಾಪಸ್ ನೀಡಿದರೆ ಹಕ್ಕುಪತ್ರ ವಿತರಿಸಲಾಗುವುದು ಎಂದು ತಹಶೀಲ್ದಾರ್ ಹೇಳಿದರು.
ಸ್ಮಶಾನ ಜಾಗಕ್ಕೆ ಸಂಬAಧಿಸಿದAತೆ ಕಡತಗಳು ವಿಲೇವಾರಿಗೆ ಬಾಕಿ ಇದ್ದರೆ ತನ್ನ ಗಮನಕ್ಕೆ ತರಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಕಡತ ವಿಲೇವಾರಿ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಕಾರ್ಮಿಕರ ನೋಂದಣಿ ಮಾಡಿಸಿ : ತಾಲೂಕು ಕಾರ್ಮಿಕ ಇಲಾಖೆಯಲ್ಲಿ ೩೦೭೮ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಕಾರ್ಮಿಕರ ೧೮ ಮಕ್ಕಳ ವಿವಾಹಕ್ಕೆ ತಲಾ ೫೦ ಸಾವಿರದಂತೆ ೯ ಲಕ್ಷ, ೪ ಮಂದಿಗೆ ಪಿಂಚಣಿ, ಮರಣಹೊಂದಿದ ೫ ಕಾರ್ಮಿಕರ ಕುಟುಂಬಕ್ಕೆ ತಲಾ ೫೦ ಸಾವಿರ, ಖಾಸಗಿ ವಾಣಿಜ್ಯ ವಾಹನ ಚಾಲಕನ ಸಾವು ಪ್ರಕರಣದಲ್ಲಿ ೫ ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ಲೀನಾ ಸಭೆಗೆ ತಿಳಿಸಿದರು.
ಕಾರ್ಮಿಕರ ನೋಂದಣಿ ಹೆಚ್ಚು ಮಾಡಿಸಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ನೆರವು ಒದಗಿಸುತ್ತಿದ್ದು, ಹೆಚ್ಚು ಫಲಾನುಭವಿಗಳಿಗೆ ಈ ಸೌಲಭ್ಯ ತಲುಪಬೇಕು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ರಂಜನ್ ಸೂಚಿಸಿದರು.
ಮಕ್ಕಳ ಸಂಖ್ಯೆ ಕಡಿಮೆ ಇರುವ ಸರ್ಕಾರಿ ಶಾಲೆಗಳ ಪೋಷಕರ ಸಭೆ ನಡೆಸಿ, ಆ ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗಳಿಗೆ ದಾಖಲಿಸುವ ಬಗ್ಗೆ ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಕಲ್ಪಿಸುವ ಬಗ್ಗೆ ತಿಳುವಳಿಕೆ ನೀಡಬೇಕೆಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಅವರಿಗೆ ಶಾಸಕ ರಂಜನ್ ಸೂಚಿಸಿದರು. ಇದರೊಂದಿಗೆ ಶಾಲೆಗಳ ಕಟ್ಟಡಗಳಿಗೆ ಅನುದಾನ ನೀಡಿದ್ದು, ಕಾಮಗಾರಿ ಪರಿಶೀಲಿಸಬೇಕು. ಶಾಲೆಗಳ ಜಾಗಕ್ಕೆ ಸಂಬAಧಿಸಿದAತೆ ದಾಖಲೆಗಳನ್ನು ಹೊಂದಿಸಿಕೊಳ್ಳಬೇಕು ಎಂದರು.
ಜಿ.ಪA. ಕಾಮಗಾರಿ ಪ್ರಗತಿಯಲ್ಲಿ: ತಾಲೂಕಿನಾದ್ಯಂತ ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗದಿಂದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಾರ್ಚ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಅಭಿಯಂತರ ವೀರೇಂದ್ರ ಹೇಳಿದರು.
ಎನ್ಡಿಆರ್ಎಫ್ನಡಿ ೯೮೪ ಲಕ್ಷ ವೆಚ್ಚದಲ್ಲಿ ೩೭೫ ಕಾಮಗಾರಿ ಗುರುತಿಸಿದ್ದು, ಇದರಲ್ಲಿ ೨೫೦ ಕಾಮಗಾರಿ ಪೂರ್ಣಗೊಂಡಿಗೆ, ೧೨೫ ಕಾಮಗಾರಿ ಪ್ರಗತಿಯಲ್ಲಿದೆ. ಎಸ್ಡಿಆರ್ಎಫ್ನಿಂದ ೯೦೦ ಲಕ್ಷ ವೆಚ್ಚದಲ್ಲಿ ೧೩೦ ಕಾಮಗಾರಿಗಳು ಪೂರ್ಣಗೊಂಡಿದೆ. ಮಳೆಹಾನಿ ಪರಿಹಾರದಡಿ ೧೦ ಕೋಟಿ ವೆಚ್ಚದಲ್ಲಿ ೨೦೦ ಕಾಮಗಾರಿ ಮಂಜೂರಾಗಿದ್ದು, ೫೦ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಸ್ವಚ್ಛ ಭಾರತ್ ಯೋಜನೆಯಡಿ ೩೩ ಕಾಮಗಾರಿಗಳ ಪೈಕಿ ೧೧ ಕಾಮಗಾರಿ ಪೂರ್ಣಗೊಂಡಿದೆ. ೭ ಕಡೆಗಳಲ್ಲಿ ಜಾಗದ ಸಮಸ್ಯೆ ಇದೆ. ಸಿಎಂಜಿಎಸ್ವೈ ಅಡಿಯಲ್ಲಿ ೪೨ ಕಾಮಗಾರಿಗಳ ಪೈಕಿ ೨೯ ಪೂರ್ಣಗೊಂಡಿದೆ. ಜಿ.ಪಂ. ಅನಿರ್ಬಂಧಿತ ಯೋಜನೆಯಡಿ ೧೮೯ ಲಕ್ಷದಲ್ಲಿ ೭೯ ಕಾಮಗಾರಿ ಪಟ್ಟಿ ಮಾಡಿದ್ದು, ಇದರಲ್ಲಿ ೩೦ ಪೂರ್ಣಗೊಂಡಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ೮೭ ಕೋಟಿ ಅನುದಾನ ಬಂದಿದೆ ಎಂದು ಸಭೆಗೆ ವಿವರ ಒದಗಿಸಿದರು.
ನೋಟೀಸ್ ನೀಡಿ: ಲೋಕೋಪಯೋಗಿ ಇಲಾಖೆ ಮೂಲಕ ೬ ರಸ್ತೆಗಳ ಅಭಿವೃದ್ಧಿಗೆ ೧೪.೫೦ ಕೋಟಿ ಅನುದಾನ ಬಂದಿದ್ದು, ಇದರಲ್ಲಿ ೫ ರಸ್ತೆ ಪೂರ್ಣಗೊಂಡಿದೆ. ನೆಲ್ಲಿಹುದಿಕೇರಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ವಿಶೇಷ ಪ್ಯಾಕೇಜ್ನಡಿ ೧೦ ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ೧೨.೫೦ ಕೋಟಿ ವೆಚ್ಚದ ಕುಶಾಲನಗರ ನ್ಯಾಯಾಲಯ ಸಂಕೀರ್ಣ ಕಾಮಗಾರಿಯು ಟೆಂಡರ್ ಹಂತದಲ್ಲಿದೆ ಎಂದು ಎಇಇ ಮೋಹನ್ಕುಮಾರ್ ತಿಳಿಸಿದರು.
ಟೆಂಡರ್ ಪಡೆದು ಕೆಲಸ ನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಬೇಕು. ಅಂತಹ ಗುತ್ತಿಗೆದಾರರಿಗೆ ತಕ್ಷಣ ನೋಟೀಸ್ ನೀಡಿ. ಟೆಂಡರ್ ರದ್ದುಪಡಿಸಲು ಕ್ರಮಕೈಗೊಳ್ಳಿ. ಯಾವ ಪಕ್ಷದವರಾದರೂ ಮುಲಾಜು ಬೇಡ ಎಂದು ಶಾಸಕ ರಂಜನ್ ಅವರು ಅಭಿಯಂತರರಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ವೈದ್ಯರನ್ನು ನಿಯೋಜಿಸಿ: ಕುಶಾಲನಗರ ತಾಲೂಕಿನ ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಯಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ತಕ್ಷಣ ವೈದ್ಯರನ್ನು ನಿಯೋಜಿಸಲು ಕ್ರಮ ಕೈಗೊಳ್ಳಿ ಎಂದು ವೈದ್ಯಾಧಿಕಾರಿ ಬದಾಮಿ ಅವರಿಗೆ ಸೂಚಿಸಿದರು.
ಪಶುವೈದ್ಯಕೀಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ೩೭ ಹುದ್ದೆಗಳ ಪೈಕಿ ಕೇವಲ ೭ ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಹೊರ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನಿಯೋಜಿಸಲು ಕ್ರಮಕೈಗೊಳ್ಳುವಂತೆ ಡಾ. ಬದಾಮಿ ಮನವಿ ಮಾಡಿದರು. ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಸದ್ಯಕ್ಕೆ ತಾಲೂಕಿನಲ್ಲಿ ೪೪೦ ಪಾಸಿಟಿವ್ ಪ್ರಕರಣಗಳಿವೆ. ಶಾಲಾ ಮಕ್ಕಳಲ್ಲೂ ಕೋವಿಡ್ ಪ್ರಕರಣ ಕಡಿಮೆಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದರು. ಸುಂಟಿಕೊಪ್ಪ ಆಸ್ಪತ್ರೆಯ ವೈದ್ಯರು ಅನಧಿಕೃತ ರಜೆ ಹಾಕಿ ತೆರಳಿದ್ದು, ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಲು ಕ್ರಮಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು.
ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ೧೪.೭೫ ಕೋಟಿ ವೆಚ್ಚದ ಕಾಮಗಾರಿಗಳು ನಡೆದಿದ್ದು, ಇದರಲ್ಲಿ ೨.೮೫ ಕೋಟಿ ಅನುದಾನ ಬಿಡುಗಡೆಗೆ ಬಾಕಿಯಿದೆ ಎಂದುಅಧಿಕಾರಿ ರವೀಶ್ ತಿಳಿಸಿದರು. ಎನ್ಆರ್ಇಜಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಸಂಬAಧ ಗ್ರಾ.ಪಂ. ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆಯುವಂತೆ ಶಾಸಕರು ಸೂಚಿಸಿದರು.
ಕೆಡಿಪಿ ಸಭೆಗಳಿಗೆ ಪೂರ್ಣ ಮಾಹಿತಿಯೊಂದಿಗೆ ಅಧಿಕಾರಿಗಳು ಹಾಜರಾಗಬೇಕು. ಸರ್ಕಾರಿ ಸೌಲಭ್ಯಗಳನ್ನು ಆದಷ್ಟು ಶೀಘ್ರವಾಗಿ ರೈತರು ಹಾಗೂ ಸಾರ್ವಜನಿಕರಿಗೆ ತಲುಪಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಶಾಸಕರು ಮನವಿ ಮಾಡಿದರು. ಸಭೆಯ ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ರಾಜಗೋಪಾಲ್, ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ತಹಶಿಲ್ದಾರ್ ಗೋವಿಂದರಾಜು ಉಪಸ್ಥಿತರಿದ್ದರು.