ಮಡಿಕೇರಿ, ಫೆ. ೯: ನೋಂದಾಯಿತ ಎಲೆಕ್ಟಿçÃಶಿಯನ್ ಕಟ್ಟಡ ಕಾರ್ಮಿಕರಿಗೆ ಹಿರಿತನ ಆಧಾರದ ಮೇಲೆ ಎಲೆಕ್ಟಿçÃಶಿಯನ್ ಟೂಲ್ ಕಿಟ್‌ಗಳನ್ನು ಸಂಬAಧಪಟ್ಟ ಕಾರ್ಮಿಕರಿಗೆ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.

ವೀರಾಜಪೇಟೆ ಶಾಸಕರ ಕಚೇರಿಯಲ್ಲಿ ಕಿಟ್ ವಿತರಿಸಿ ಮಾತನಾಡಿದ ಶಾಸಕರು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸುರಕ್ಷಿತವಾಗಿ ಎಲೆಕ್ಟಿçÃಶಿಯನ್ ಕಟ್ಟಡ ಕಾರ್ಯ ನಿರ್ವಹಿಸುವಂತೆ, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಾರ್ಮಿಕರು ಬಳಸಿಕೊಳ್ಳುವಂತಾಗಬೇಕು ಎಂದು ಅವರು ತಿಳಿಸಿದರು.

ಇ-ಶ್ರಮ್ ಕಾರ್ಡ್ಗಳನ್ನು ವಿತರಿಸಿ ೧೫೬ ಬಗೆಯ ಅಸಂಘಟಿತ ವಲಯದ ಕಾರ್ಮಿಕರು ಗುರುತಿನ ಚೀಟಿ ಪಡೆಯುವಂತಾಗಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ತಾಲೂಕು ಕಾರ್ಮಿಕ ಅಧಿಕಾರಿ ಎಂ.ಎA. ಯತ್ನಟ್ಟಿ ಇತರರು ಇದ್ದರು.