ಮಡಿಕೇರಿ, ಫೆ. ೯: ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್ ಪಂದ್ಯಾವಳಿ ಯಾದ ರಣಜಿ ಟ್ರೋಫಿ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು. ಮನೀಷ್ ಪಾಂಡೆ ನಾಯಕತ್ವದ ತಂಡದಲ್ಲಿ ಕೊಡಗಿನವರಾದ ಕೊಂಗಾAಡ ಸಿ. ಕಾರ್ಯಪ್ಪ ಸ್ಥಾನ ಪಡೆದಿದ್ದಾರೆ.
ಫೆಬ್ರವರಿ ೧೭ ರಿಂದ ಚೆನ್ನೆöÊನಲ್ಲಿ ಕರ್ನಾಟಕ ರೈಲ್ವೇಸ್ ತಂಡವನ್ನು ಎದುರಿಸಲಿದ್ದು, ಪ್ರಸಕ್ತ ರಣಜಿ ಋತುವನ್ನು ಆರಂಭಿಸಲಿದೆ. ಬೌಲಿಂಗ್ನಲ್ಲಿ ಸಾಧನೆ ತೋರಿರುವ ಕೆ.ಸಿ. ಕಾರ್ಯಪ್ಪ ಇದೇ ಪ್ರಥಮ ಬಾರಿಗೆ ರಣಜಿ ಕ್ರಿಕೆಟ್ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಈ ಹಿಂದೆ ಟಿ-೨೦ ಹಾಗೂ ಏಕದಿನ ಪಂದ್ಯಾವಳಿ ಯಲ್ಲಿ ರಾಜ್ಯವನ್ನು ಕಾರ್ಯಪ್ಪ ಪ್ರತಿನಿಧಿಸಿದ್ದರೂ ಪ್ರತಿಷ್ಠಿತ ವಾದ ರಣಜಿ ಪಂದ್ಯಾವಳಿ ಯಲ್ಲಿ ಆಡಿರಲಿಲ್ಲ. ಐಪಿಎಲ್ನಲ್ಲಿ ಕೆ.ಕೆ.ಆರ್. ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು ಇವರು ಪ್ರತಿನಿಧಿಸಿದ್ದಾರೆ.
ಇತ್ತೀಚೆಗೆ ನಡೆದ ಮುಸ್ತಾಕ್ ಆಲಿ ಏಕದಿನ ಸರಣಿಯಲ್ಲಿ ೧೩ ವಿಕೆಟ್ ಹಾಗೂ ವಿಜಯ್ ಹಜಾರೆ ಸರಣಿ ಯಲ್ಲಿ ೭ ವಿಕೆಟ್ಗಳ ಸಾಧನೆಯೊಂದಿಗೆ ಕಾರ್ಯಪ್ಪ ಗಮನ ಸೆಳೆದಿದ್ದರು. ಇವರು ಜಿಲ್ಲೆಯ ಕಂಡAಗಾಲದ ಕೊಂಗಾAಡ ಚರ್ಮಣ (ಡಿಕ್ಕಿ) ಹಾಗೂ ಪ್ರತಿಮಾ ದಂಪತಿಯ ಪುತ್ರ.
ಈ ಹಿಂದೆ ಮುಂಡAಡ ರಾಜಪ್ಪ, ಶ್ಯಾಮ್ ಪೊನ್ನಪ್ಪ, ರಾಬಿನ್ ಉತ್ತಪ್ಪ, ಕೆ.ಎಂ. ಅಯ್ಯಪ್ಪ, ಎನ್.ಸಿ. ಅಯ್ಯಪ್ಪ, ಕೆ.ಪಿ. ಅಪ್ಪಣ್ಣ ಅವರುಗಳು ರಣಜಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಪಟ್ಟಮಾಡ ಬೆಳ್ಳಿಯಪ್ಪ ಅವರು ತಮಿಳುನಾಡು ತಂಡದ ಪರ ಆಡಿದ್ದರು.