ಮಡಿಕೇರಿ, ಫೆ. ೧೦: ಹಿಜಾಬ್ ವಿಚಾರಕ್ಕೆ ಸಂಬAಧಿಸಿದAತೆ ಸಂಸದ ಪ್ರತಾಪ್ ಸಿಂಹ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದು, ರಾಜಕೀಯ ಲಾಭಕ್ಕಾಗಿ ಮಕ್ಕಳ ಮನಸ್ಸಲ್ಲಿ ವಿಷಬೀಜ ಬಿತ್ತಲಾಗಿದೆ ಎಂದು ಜಾತ್ಯತೀತ ಜನತಾದಳ ಅಲ್ಪಸಂಖ್ಯಾತ ಘಟಕ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಇಸಾಕ್ ಖಾನ್, ಹಿಜಾಬ್ ಹಾಗೂ ಕೇಸರಿ ಶಾಲ್ ವಿಚಾರವನ್ನು ಜಿಲ್ಲೆಯಲ್ಲಿ ಪ್ರಸ್ತಾಪ ಮಾಡಿರುವ ಸಂಸದ ಪ್ರತಾಪ್ ಸಿಂಹ ಅವರು, ಅಶಾಂತಿಯನ್ನು ಸೃಷ್ಟಿಮಾಡಿ ಹೋಗಿದ್ದಾರೆ. ಶಾಲೆಯ ಮಕ್ಕಳಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮಕ್ಕಳಲ್ಲಿ ವಿಷ ಬಿತ್ತಿದ್ದಾರೆ. ರಾಜಕೀಯಕ್ಕಾಗಿ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ರಾಜಕೀಯ ಮಾಡಲು, ಚರ್ಚಿಸಲು ಬೇಕಾದಷ್ಟು ಸಮಸ್ಯೆಗಳಿವೆ. ಅದರ ಬಗ್ಗೆ ಮಾತಾಡಲಿ. ಅದು ಬಿಟ್ಟು ಮಕ್ಕಳ ಮನಸ್ಸನ್ನು ಒಡೆದಿದ್ದಾರೆ. ಇದು ಅವರಿಗೇ ಮಾರಕವಾಗಲಿದೆ ಎಂದು ಹೇಳಿದರು.
ಸಂಸದರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಪ್ರಚೋದನೆ ಮಾಡಿರುವವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎA. ಮನ್ಸೂರ್ ಅಲಿ ಮಾತನಾಡಿ, ಹಿಜಾಬ್ಅನ್ನು ಅನೇಕ ವರ್ಷಗಳಿಂದ ಧರಿಸುತ್ತಿದ್ದಾರೆ. ಇದೀಗ ಚುನಾವಣೆಗೆ ಬೇರೆ ವಿಚಾರಗಳಿಲ್ಲದಿರುವುದರಿಂದ ಈ ವಿಚಾರದಲ್ಲಿ ಕೋಮು ಪ್ರಚೋದನೆ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಜೆ.ಡಿ.ಎಸ್. ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಪೊಲೀಸ್ ಇಲಾಖೆ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಡಿಕೇರಿ ನಗರಾಧ್ಯಕ್ಷ ಖಲೀಲ್ ಮಾತನಾಡಿ, ಸಂಸದರು ಹೇಳಿದಂತೆ ಯಾರೂ ಕೂಡ ಪಾಕಿಸ್ತಾನಕ್ಕೆ ಹೋಗಲು ಇಷ್ಟಪಡುವುದಿಲ್ಲ. ನಾವು ಶಾಂತಿ ಪ್ರಿಯರು, ನಮಗೆ ಶಾಂತಿಬೇಕು. ನಮಗೆ ಇಲ್ಲಿಯೇ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದರು.
ಯುವ ಘಟಕದ ಅಧ್ಯಕ್ಷ ಜಾಶೀರ್, ಕಾರ್ಮಿಕ ಘಟಕದ ಮಾರ್ಟಿನ್, ಮಡಿಕೇರಿ ನಗರಸಭಾ ಸದಸ್ಯ ಮುಸ್ತಫಾ ಗೋಷ್ಠಿಯಲ್ಲಿದ್ದರು.