ಮಡಿಕೇರಿ, ಫೆ. ೯ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮೂಲಕ ಜಿಲ್ಲೆಯ ಹೊದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯಗತಗೊಳ್ಳಲಿರುವ ಅಂತರರಾಷ್ಟಿçÃಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ಭವಿಷ್ಯದಲ್ಲಿ ಜಿಲ್ಲೆಯ ಕ್ರಿಕೆಟ್ ಪ್ರತಿಭೆಗಳು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳಿಗೆ ವರದಾನವಾಗಲಿವೆ. ಈ ಸುಸಜ್ಜಿತ ಸ್ಟೇಡಿಯಂ ಪೂರ್ಣಪ್ರಮಾಣದಲ್ಲಿ ನಿರ್ಮಾಣಗೊಂಡ ಬಳಿಕ ಇದು ಕೂಡ ರಾಜ್ಯದಲ್ಲಿ ಪ್ರತಿಷ್ಠಿತ ಕ್ರಿಕೆಟ್ ಸ್ಟೇಡಿಯಂಗಳ ಪಟ್ಟಿಗೆ ಸೇರ್ಪಡೆಯಾಗಲಿದೆ. ಈ ಮೂಲಕ ಭವಿಷ್ಯದಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ, ಕೆಪಿಎಲ್ ಸೇರಿದಂತೆ ಇನ್ನಷ್ಟು ಪ್ರತಿಷ್ಠಿತವಾದ ಪಂದ್ಯಾವಳಿಗಳು ಕೂಡ ಕೊಡಗಿನಲ್ಲಿ ನಡೆಯುವ ಆಶಾಭಾವನೆಗಳಿವೆ.
ಕಳೆದ ಕೆಲವು ವರ್ಷಗಳ ಹಿಂದೆ ರೂಪಿತವಾಗಿದ್ದ ಯೋಜನೆ ಕಾರಣಾಂತರಗಳಿAದ ವಿವಾದಕ್ಕೆಡೆಯಾಗಿ ನೆನೆಗುದಿಗೆ ಬಿದ್ದಿತ್ತು. ಇದೀಗ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಗತ್ಯ ಸಹಕಾರ, ಇತರರ ಸ್ಪಂದನೆ ಯೊಂದಿಗೆ ವಿವಾದಗಳು ಬಗೆಹರಿದಂತಾಗಿದ್ದು, ಕಾಮಗಾರಿ ಪ್ರಾರಂಭದ ಹಂತಕ್ಕೆ ಬಂದಿದೆ.