ಪೊನ್ನಂಪೇಟೆ, ಫೆ. ೧೦: ನಗರದ ಅಂಗಡಿಯ ಮುಂದೆ ನಾಚಪ್ಪ ಎಂಬವರು ತಮ್ಮ ಬೈಕ್ ನಿಲ್ಲಿಸಿ, ಬೈಕ್‌ನ ಸೀಟ್ ಮೇಲೆ ೧೫ ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಇಟ್ಟು ಮರೆತು ಹೋಗಿದ್ದರು. ಇದನ್ನು ಗಮನಿಸಿದ ಹಿರಿಯ ಛಾಯಾಗ್ರಾಹಕ ಎಸ್.ಎಲ್. ಶಿವಣ್ಣ ಮೊಬೈಲ್ ಅನ್ನು ಜೋಪಾನವಾಗಿ ತೆಗೆದಿಟ್ಟು ಸುಮಾರು ೧ ಗಂಟೆ ನಂತರ ಸ್ಥಳಕ್ಕೆ ಬಂದ ವಾರಸುದಾರರಿಗೆ ಒಪ್ಪಿಸಿದರು. ಈ ಹಿಂದೆಯೂ ಕೂಡ ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ೧೮ ಸಾವಿರ ರೂಪಾಯಿ ಮೌಲ್ಯದ ಮೊಬೈಲ್‌ವೊಂದನ್ನು ವಾರಸುದಾರರಿಗೆ ಒಪ್ಪಿಸುವ ಮೂಲಕ ಶಿವಣ್ಣನವರು ಪ್ರಾಮಾಣಿಕತೆ ಮೆರೆದಿದ್ದರು.