ಬೆಟ್ಟದಲ್ಲಿ ಸಿಲುಕಿದ ಯುವಕನ ರಕ್ಷಣೆ

ಪಾಲಕ್ಕಾಡ್, ಫೆ. ೯: ಟ್ರೆಕ್ಕಿಂಗ್ ಹೋಗಿ ಮಲಂಪುಳ ಬೆಟ್ಟದಲ್ಲಿ ಅಪಾಯಕ್ಕೆ ಸಿಲುಕಿದ್ದ ಯುವಕನೋರ್ವನನ್ನು ಭಾರತೀಯ ಸೇನೆ ಹಾಗೂ ಎನ್.ಡಿ.ಆರ್.ಎಫ್. ಸಾಹಸದ ಕಾರ್ಯಾಚರಣೆ ಮಾಡಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಕೇರಳದ ಮಲಂಪುಳ ಪರ್ವತಗಳ ಕಡಿದಾದ ಬೆಟ್ಟದ ಬಂಡೆಕಲ್ಲಿನ ನಡುವೆ ಸಿಲುಕಿದ್ದ ಯುವಕನನ್ನು ಸತತ ಕಾರ್ಯಾಚರಣೆಯ ಬಳಿಕ ರಕ್ಷಣೆ ಮಾಡಲಾಯಿತು. ಮಲಂಪುಳದ ೨೩ ವರ್ಷದ ಬಾಬು ಎಂಬ ಯುವಕ, ಸೋಮವಾರ (ಫೆ.೮) ಮೂವರು ಸ್ನೇಹಿತರ ಜೊತೆಗೆ ಚಾರಣಕ್ಕೆ ತೆರಳಿದ್ದನು. ಈ ವೇಳೆ ಮಾರ್ಗ ಮಧ್ಯೆ ಕಾಲು ಜಾರಿ ಕಡಿದಾದ ಬೆಟ್ಟದಲ್ಲಿನ ಕೊರಕಲಿನ ನಡುವೆ ಸಿಲುಕಿದ್ದನು. ಫೋನ್ ಮೂಲಕ ಸಂಬAಧಿಕರಿಗೆ ತನ್ನ ಪರಿಸ್ಥಿತಿ ಬಗ್ಗೆ ತಿಳಿಸಿದನು. ಸುಮಾರು ೧,೦೦೦ ಮೀಟರ್ ಎತ್ತರದ ಬೆಟ್ಟ ಇದಾಗಿದ್ದು, ಕಳೆದೆರಡು ದಿನಗಳಿಂದ ನೀರು, ಆಹಾರ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದನು. ಈ ವಿಚಾರ ತಿಳಿದ ಸ್ಥಳೀಯ ಆಡಳಿತದ, ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುವ ಪ್ರಯತ್ನಕ್ಕೆ ಚಿಂತಿಸಿತ್ತಾದರೂ ಈ ರೀತಿಯ ಕಾರ್ಯಾಚರಣೆಯಿಂದ ಅಪಾಯ ಹೆಚ್ಚಿರುವುದನ್ನು ಅರಿತು ಇದರಿಂದ ಹಿಂಜರಿಯಿತು. ಮದ್ರಾಸ್ ರೆಜಿಮೆಂಟ್‌ನ ೧೨ ಮಂದಿಯ ತಂಡದಲ್ಲಿ ಪರ್ವತಾರೋಹಿಗಳು ಸೇರಿದಂತೆ ನುರಿತ ಸಿಬ್ಬಂದಿಗಳು ಒಳಗೊಂಡಿದ್ದರು. ಹಾಗೆಯೇ ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಸೆಂಟರ್‌ನಿAದ ತೆರಳಿರುವ ೨೨ ಸಿಬ್ಬಂದಿಯ ಎರಡನೇ ತಂಡವು ವಿಮಾನ ಮಾರ್ಗವಾಗಿ ಸೂಲೂರು ಮೂಲಕ ಘಟನಾ ಸ್ಥಳಕ್ಕೆ ತಲುಪಿತ್ತು. ಭಾರತೀಯ ಸೇನೆಯು ಬೆಟ್ಟದ ಮೇಲಿನಿಂದ ಕೊರಕಲಿನವರೆಗೆ ಹಗ್ಗಗಳ ಸಹಾಯದಿಂದ ಇಳಿದು ಯುವಕನನ್ನು ರಕ್ಷಿಸುವಲ್ಲಿ ಸಫಲವಾಯಿತು. ಯುವಕನನ್ನು ರಕ್ಷಿಸಿದ ಬಳಿಕ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಸೇನೆಯ ಈ ಸಾಹಸ ಭರಿತ ರಕ್ಷಣಾ ಕಾರ್ಯಾಚರಣೆಗೆ ಎಲ್ಲೆಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಕಾರ್ಯಾಚರಣೆ ನಡೆಯುವ ವೇಳೆ ಯುವಕನ ತಾಯಿ ಪರ್ವತದ ಕೆಳಗೆಯೇ ತನ್ನ ಪುತ್ರನಿಗಾಗಿ ಆಹಾರ ಕೂಡ ಸೇವಿಸದೆ ಕಾಯುತ್ತಿದ್ದರು.

ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ

ಬೆಂಗಳೂರು, ಫೆ. ೯: ಶಾಲೆ-ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸುವ ವಿವಾದ ಹಿಂಸಾಚಾರಕ್ಕೆ ತಿರುಗಿದ್ದು ಸಂಬAಧಪಟ್ಟವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿAದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ವಿದ್ಯಮಾನದಲ್ಲಿ ಯಾರದ್ದೋ ಪಿತೂರಿ ಇದೆ, ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ರಾಜ್ಯದ ಯಾವುದೇ ಭಾಗದಲ್ಲಿ ಅಹಿತಕರ ಕಾನೂನು ಬಾಹಿರ ಘಟನೆ ನಡೆದರೆ ನಮ್ಮ ಇಲಾಖೆಯ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಪೊಲೀಸರು ಕೇಸು ದಾಖಲಿಸಿದ್ದಾರೆ. ಘಟನೆ ಸಂಬAಧ ಕೆಲವರ ಬಂಧನವಾಗಿದ್ದು, ವಿದ್ಯಾರ್ಥಿಗಳ ಬಂಧನ ಇನ್ನೂ ಆಗಿಲ್ಲ, ಅನಗತ್ಯವಾಗಿ ಸೆಕ್ಷನ್ ೧೪೪ ಜಾರಿಗೊಳಿಸುವುದಿಲ್ಲ, ಇಲ್ಲಿ ಸರ್ಕಾರ ಜೊತೆ ಆಟವಾಡುತ್ತಿದ್ದಾರೆ, ಆಟವನ್ನು ಅಡಗಿಸುವ ಶಕ್ತಿ ನಮಗಿದೆ ಎಂದು ಹೇಳಿದರು. ಇಡೀ ರಾಜ್ಯದ ಜನರು ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು. ವಿದ್ಯಾರ್ಥಿಗಳು ವಿದ್ಯಾದೇಗುಲಕ್ಕೆ ವಿದ್ಯೆ ಕಲಿಯಲು ಬರಬೇಕೆ ವಿನಃ ಅವರ ತಲೆಯಲ್ಲಿ ಕೋಮು ಪ್ರಚೋದನಕಾರಿ ವಿಷಯಗಳನ್ನು ತುಂಬಬಾರದು. ವಿದ್ಯಾರ್ಥಿಗಳು ದೇಶವನ್ನು ಪ್ರೀತಿಸುವ ವಾತಾವರಣ ನಿರ್ಮಾಣವಾಗಬೇಕು ಎಂದರು.

ವಿಮಾನ ಟೇಕ್-ಆಫ್ ವೇಳೆ ತಾಂತ್ರಿಕ ಸಮಸ್ಯೆ

ಮುಂಬೈ, ಫೆ. ೯: ಅಲಯನ್ಸ್ ಏರ್‌ನ ಎಟಿಆರ್ ವಿಮಾನವು ಮುಂಬೈನಿAದ ಟೇಕ್-ಆಫ್ ಆದ ಕೂಡಲೇ ಎಂಜಿನ್‌ನ ಮೇಲಿನ ಕವರ್ ರನ್‌ವೇ ಮೇಲೆ ಬಿದ್ದಿದ್ದು ದೊಡ್ಡ ದುರಂತ ತಪ್ಪಿದೆ. ಆದರೆ ಸ್ವಲ್ಪ ಸಮಯದ ನಂತರ ವರದಿಯಾದಾಗ ವಿಮಾನವು ಒಡಿಶಾದ ಭುಜ್‌ನಲ್ಲಿ ತಕ್ಷಣವೇ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಎಂಜಿನ್‌ನ ಮೇಲಿನ ಕವರ್ ಹೇಗೆ ಬಿದ್ದಿದೆ ಎಂಬುದರ ಕುರಿತು ತನಿಖೆ ಪ್ರಾರಂಭಿಸಿದೆ. ಅಲಯನ್ಸ್ ಏರ್ ಮುಂಬೈನಿAದ ಒಡಿಶಾದ ಭುಜ್‌ಗೆ ಟೇಕ್ ಆಫ್ ಆಗಬೇಕಿತ್ತು. ಆದರೆ ವಿಮಾನದ ಇಂಜಿನ್ ಕವರ್ ರನ್‌ವೇ ಮೇಲೆ ಬಿದ್ದು ಎಂಜಿನ್ ಕವರ್ ಇಲ್ಲದೆ ಹಾರಿತು ಎಂದು ಮುಂಬೈ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇದಲ್ಲದೆ ವಿಮಾನವು ಸುರಕ್ಷಿತವಾಗಿ ಭುಜ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ವಿಮಾನಯಾನ ಸಂಸ್ಥೆಗಳ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈನಿAದ ಟೇಕ್ ಆಫ್ ಆದ ಕೂಡಲೇ ಮುಂಬೈ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ವಾಯುಯಾನ ತಜ್ಞ ಕ್ಯಾಪ್ಟನ್ ಅಮಿತ್ ಸಿಂಗ್ ಈ ಘಟನೆಗೆ ಕಳಪೆ ನಿರ್ವಹಣಾ ಕೆಲಸ ಕಾರಣ ಎಂದು ಹೇಳಿದ್ದಾರೆ.

ಹಿಜಾಬ್ ವಿಚಾರದಲ್ಲಿ ರಾಜಕೀಯ ಬೇಡ-ಖರ್ಗೆ

ನವದೆಹಲಿ, ಫೆ. ೯: ಕರ್ನಾಟಕದಲ್ಲಿ ಹಿಜಾಬ್ ವಿವಾದ ಸಂಘರ್ಷದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಈ ಕುರಿತು ಇದೇ ಮೊದಲ ಬಾರಿಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು, ಸೂಕ್ಷö್ಮ ವಿಚಾರದಲ್ಲಿ ರಾಜಕೀಯ ಬೇಡ ಎಂದು ನಾಯಕರಿಗೆ ಸಲಹೆ ನೀಡಿದ್ದಾರೆ. ದೆಹಲಿಯಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಸಂಘರ್ಷವನ್ನು ಕೊನೆಗಾಣಿಸುವುದು ಕರ್ನಾಟಕ ಸರ್ಕಾರದ ಜವಾಬ್ದಾರಿ. ಅಲ್ಲದೇ ವಿಪಕ್ಷಗಳು ಕೂಡ ಈ ಸಂಘರ್ಷವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಸಂಘರ್ಷ ಅತ್ಯಂತ ಖೇದಕರ ಸಂಗತಿ. ರಾಜ್ಯ ಸರ್ಕಾರ ಆದಷ್ಟು ಬೇಗ ಈ ಸಂಘರ್ಷವನ್ನು ಕೊನೆಗಾಣಿಸಬೇಕು. ವಿಪಕ್ಷಗಳು ಕೂಡ ಇದರಲ್ಲಿ ರಾಜಕೀಯ ಲಾಭವನ್ನು ಹುಡುಕಬಾರದು. ರಾಜ್ಯದ ಕೋಮು ಸೌಹಾರ್ದತೆಯನ್ನು ಮತ್ತು ಹಿಂದೂ-ಮುಸ್ಲಿA ಒಗ್ಗಟ್ಟನ್ನು ಮುರಿಯಲು ಹಿಜಾಬ್ ವಿವಾದವನ್ನು ಸೃಷ್ಟಿಸಲಾಗಿದೆ. ವಿವಿಧತೆಯಲ್ಲಿ ಏಕತೆ ಎಂಬುದು ಕರ್ನಾಟಕದ ಮಂತ್ರ. ಈ ಏಕತೆಯನ್ನು ಮುರಿಯಲು ಕೆಲವು ಹಿಜಾಬ್ ಅಸ್ತç ಬಳಸುತ್ತಿರುವುದು ನೋವಿನ ಸಂಗತಿ ಎಂದು ಖರ್ಗೆ ಹೇಳಿದ್ದಾರೆ.