ಕೂಡಿಗೆ, ಫೆ. ೧೦: ಬೈಕ್ ಅಪಘಾತಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕೂಡಿಗೆ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಪ್ರಜ್ವಲ್ (೨೨) ಅವರ ಅಂಗಾAಗಗಳನ್ನು ದಾನ ಮಾಡಲಾಯಿತು. ಕಣ್ಣು, ಕಿಡ್ನಿಗಳು, ಹೃದಯ ಸೇರಿದಂತೆ ಬಹು ಅಂಗಾAಗಗಳನ್ನು ದಾನ ಮಾಡಲಾಯಿತು.
ಮಲ್ಲೇನಹಳ್ಳಿಯ ಸುರೇಶ್ ಅವರ ಪುತ್ರ ಪ್ರಜ್ವಲ್, ತಾ. ೮ ರಂದು ಕೂಡ್ಲೂರು ಕಾಫಿ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದ ವೇಳೆ ರಾತ್ರಿ ಸುಮಾರು ೧೦ ಗಂಟೆಗೆ ಎದುರಿನಿಂದ ಪವನ್ ಎಂಬವರು ಚಾಲಿಸುತ್ತಿದ್ದ ಬೈಕ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ. ಪವನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಜ್ವಲ್ ಅವರ ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ ಬಳಿಕ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಾ. ೧೦ ರಂದು ಪ್ರಜ್ವಲ್ ಮೃತಪಟ್ಟಿದ್ದು, ಅಂಗಾAಗಗಳನ್ನು ದಾನ ಮಾಡಲಾಯಿತು.
ಅಂಗಾAಗ ದಾನ ಮಾಡಿದ ಬಳಿಕ ಕೂಡಿಗೆಗೆ ಆಗಮಿಸಿದ ಪ್ರಜ್ವಲ್ ಅವರ ಪಾರ್ಥಿವ ಶರೀರಕ್ಕೆ ಸ್ಥಳೀಯರು ನಮನ ಸಲ್ಲಿಸಿದರು. ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್, ಸ್ಥಳೀಯ ಗ್ರಾ.ಪಂ. ಜನಪ್ರತಿನಿಧಿಗಳು, ಆಟೋ ಚಾಲಕರು ಮೃತದೇಹಕ್ಕೆ ಪುಷ್ಪನಮನ ಸಲ್ಲಿಸಿದರು.