ಮಡಿಕೇರಿ, ಫೆ. ೯: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಹೈಸೂಡ್ಲೂರು ಗ್ರಾಮದಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳಿಗೆ ಜಾಗ ನೀಡದಿದ್ದಲ್ಲಿ ದಿಡ್ಡಳ್ಳಿ ಮಾದರಿಯ ಹೋರಾಟ ರೂಪಿಸಲಾಗುವುದು ಎಂದು ಭಾರತ್ ಕಮ್ಯೂನಿಸ್ಟ್ ಪಕ್ಷ(ಮಾಕ್ಸ್ವಾದಿ) ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್ ಎಚ್ಚರಿಸಿದರು.
ಕಳೆದ ೫ ವರ್ಷಗಳಿಂದ ೭೪ ಆದಿವಾಸಿ ಕುಟುಂಬಗಳು ಹೈಸೂಡ್ಲೂರು ಗ್ರಾಮದ ಸರ್ವೆ ನಂ ೧೮೧/೧ಪಿ೧ ರಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಕಳೆದ ೫ ವರ್ಷಗಳಿಂದ ಅವರಿಗೆ ಯಾವುದೇ ಮೂಲಭೂತವಾದ ಸೌಕರ್ಯಗಳನ್ನು ನೀಡುತ್ತಿಲ್ಲ. ಕುಡಿಯುವ ನೀರು, ವಿದ್ಯುತ್, ರಸ್ತೆ ದುರಸ್ಥಿ ಅಲ್ಲದೇ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಸಹ ಹುದಿಕೇರಿ ಗ್ರಾಮ ಪಂಚಾಯಿತಿಯಿAದ ನೀಡದೇ ತಡೆಹಿಡಿಯಲಾಗಿದೆ. ಮುಂದಿನ ೩೦ ದಿನಗಳಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಪಕ್ಷದ ಸದಸ್ಯ ಎ.ಮಹದೇವ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದ ನಿವೇಶನ ರಹಿತರ ಪಟ್ಟಿಯನ್ನು ನೀಡಲಾಗಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಿವೇಶನ ರಹಿತರಿಗೆ ಮನೆ ಒದಗಿಸುವ ಸಲುವಾಗಿ ದಸಂಸ ಪದಾಧಿಕಾರಿಗಳು ಮತ್ತು ವಿವಿಧ ಸಂಘಟನೆಯ ಮುಖಂಡರೊAದಿಗೆ ಸಭೆ ನಡೆಸಿ ೩೦ ದಿನದೊಳಗೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಎ.ಸಿ. ಸಾಬು, ಹೆಚ್.ಆರ್. ಶಿವಪ್ಪ ಇದ್ದರು.