ಸೋಮವಾರಪೇಟೆ, ಫೆ. ೮: ಇಲ್ಲಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ತಾ. ೧೦ರಂದು ಸಾರ್ವಜನಿಕರು ಹಾಗೂ ವಿದ್ಯುತ್ ಬಳಕೆದಾರರಿಗೆ ಅರಿವು ಸಪ್ತಾಹ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ ೧೧ಕ್ಕೆ ಶನಿವಾರಸಂತೆ ಶಾಖಾ ಆವರಣ, ಮಧ್ಯಾಹ್ನ ೨ಕ್ಕೆ ಕೊಡ್ಲಿಪೇಟೆ ಶಾಖಾ ಆವರಣದಲ್ಲಿ, ತಾ. ೧೧ರಂದು ಸೋಮವಾರಪೇಟೆ ಮತ್ತು ಶಾಂತಳ್ಳಿ ವ್ಯಾಪ್ತಿಯ ವಿದ್ಯುತ್ ಬಳಕೆದಾರರಿಗೆ ಸೋಮವಾರಪೇಟೆ ಶಾಖಾ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿದ್ಯುತ್ ಅವಘಡಗಳು, ಅಪಘಾತಗಳನ್ನು ತಡೆಗಟ್ಟುವಿಕೆ, ವಿದ್ಯುತ್ ಸುರಕ್ಷತಾ ಕ್ರಮಗಳ ಬಗ್ಗೆ ನಿಗಮವು ಕೈಗೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕರು ಹಾಗೂ ಗ್ರಾಹಕರಿಗೆ ತಿಳುವಳಿಕೆ ಮೂಡಿಸಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಧನಂಜಯ ತಿಳಿಸಿದ್ದಾರೆ.