ಮಡಿಕೇರಿ, ಫೆ. ೯: ಕೃಷಿಕ್ ಸರ್ವೋದಯ ¥s಼Ëಂಡೇಶನ್ ಹಾಸನ ಶಾಖೆಯ ವತಿಯಿಂದ ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ¥s಼Ëಂಡೇಶನ್ ಹಾಸನ ಶಾಖೆಯಲ್ಲಿ ತಾ. ೧೩ ರಂದು ಬೆಳಿಗ್ಗೆ ೧೦ ಗಂಟೆಗೆ ನುರಿತ ವಿಷಯ ತಜ್ಞರಿಂದ ಎಫ್ಡಿಎ, ಎಸ್ಡಿಎ, ಪಿಎಸ್ಐ, ಪಿಸಿ ಮತ್ತಿತರ ನೇಮಕಾತಿ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರ ನಡೆಯಲಿದೆ.
ಆಸಕ್ತರು ತಾ. ೧೩ ರಂದು ಬೆಳಿಗ್ಗೆ ೯ ಗಂಟೆಯೊಳಗೆ ಮೊಬೈಲ್ ಸಂಖ್ಯೆ ೮೬೬೦೨೧೭೭೩೯ಕ್ಕೆ ಕರೆ ಮಾಡಿ/ ವಾಟ್ಸ್ಆಪ್ ಮಾಡಿ ಅಥವಾ ಕಚೇರಿ ದೂರವಾಣಿ ಸಂಖ್ಯೆ ೦೮೧೭೨-೨೪೫೧೩೫ ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸ ಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹಾಸನ ಶಾಖೆಗೆ ಭೇಟಿ ನೀಡಬಹುದು ಎಂದು ಗೌರವ ಕಾರ್ಯದರ್ಶಿ ಹೆಚ್.ಪಿ. ಮೋಹನ್ ತಿಳಿಸಿದ್ದಾರೆ.